ಮಡಿಕೇರಿ, ಅ. 24 : ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಸುರಿದು ಹೋಗಿದ್ದ ವ್ಯಕ್ತಿಗಳಿಂದಲೇ ತ್ಯಾಜ್ಯವನ್ನು ತೆಗೆಸಿ ಸ್ವಚ್ಛ ಮಾಡಿಸಿದ ಘಟನೆ ಕತ್ತಲೆಕಾಡು ಗ್ರಾಮದಲ್ಲಿ ನಡೆದಿದೆ.

ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ತಲೆಕಾಡು ಗ್ರಾಮದ ವ್ಯೂ ಪಾಯಿಂಟ್ ಬಳಿ ಎರಡು ಪ್ರತ್ಯೇಕ ಸ್ಥಳದಲ್ಲಿ ಶುಕ್ರವಾರ ರಾತ್ರಿ ಲೋಡ್‍ಗಟ್ಟಲೆ ತ್ಯಾಜ್ಯ ವಿಲೇವಾರಿ ಮಾಡಲಾಗಿತ್ತು. ಶನಿವಾರ ಬೆಳಗ್ಗೆ ಇದನ್ನು ಗಮನಿಸಿದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರು ತ್ಯಾಜ್ಯ ಸುರಿದದ್ದು ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಇದೇ ಸಂದರ್ಭ ಸ್ಥಳಕ್ಕೆ ಬಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾದೇಟಿರ ತಿಮ್ಮಯ್ಯ ಸ್ಥಳದ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೆÇೀಸ್ಟ್ ಹಾಕಿದ್ದಾರೆ.ಸುರಿದಿದ್ದ ತ್ಯಾಜ್ಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಗ್ಯಾರೇಜ್‍ಗೆ ಸಂಬಂಧಿಸಿದ ತ್ಯಾಜ್ಯ ಎಂಬುದು ಗಮನಕ್ಕೆ ಬಂದಿದೆ. ಮರಗೋಡುವಿನ ಕಿಶೋರ್ ಎಂಬವರಿಗೆ ಸೇರಿದ ಗ್ಯಾರೇಜ್‍ನ ತ್ಯಾಜ್ಯವನ್ನು ಇಲ್ಲಿ ಸುರಿಯಲಾಗಿದೆ ಎಂಬ ಮಾಹಿತಿಯನ್ನು ಅಲ್ಲಿನ ಕೆಲವರು ಕತ್ತಲೆಕಾಡು ಭಾಗದ ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ. (ಮೊದಲ ಪುಟದಿಂದ) ಮರಗೋಡುವಿಗೆ ತೆರಳಿ ಪರಿಶೀಲನೆಗೆ ಮುಂದಾಗಬೇಕೆನ್ನುವಷ್ಟರಲ್ಲಿ ತ್ಯಾಜ್ಯ ಹಾಕಿದ್ದ ವ್ಯಕ್ತಿಗೆ ವಿಷಯ ತಿಳಿದು ತನ್ನ ಕೆಲಸದವರೊಡನೆ ಕತ್ತಲೆಕಾಡುವಿಗೆ ಬಂದು ತಪೆÇ್ಪಪ್ಪಿಕೊಂಡಿದ್ದಾನೆ.

ಮರಗೋಡುವಿನ ಸಿದ್ದಾಪುರ ರಸ್ತೆಯಲ್ಲಿರುವ ಮಂಜುನಾಥ ಆಟೋ ವಕ್ರ್ಸ್‍ಗೆ ಸೇರಿದ ತ್ಯಾಜ್ಯವನ್ನು ಇಲ್ಲಿ ಸುರಿದಿರುವ ಬಗ್ಗೆ ಮಾಲೀಕ ಕಿಶೋರ್ ತಪೆÇ್ಪಪ್ಪಿಕೊಂಡಿದ್ದಾರೆ. ಆಯುಧ ಪೂಜೆ ಹಿನ್ನೆಲೆ ವರ್ಕ್‍ಶಾಪ್ ಸ್ವಚ್ಛ ಮಾಡಿ, ತ್ಯಾಜ್ಯವನ್ನು ಬೇರೆಡೆ ವಿಲೇವಾರಿ ಮಾಡಲು ಕೆಲಸದವರಿಗೆ ಹೇಳಲಾಗಿತ್ತು. ಆದರೆ ಅವರು ಇಲ್ಲಿ ತಂದು ಸುರಿದಿದ್ದಾರೆ ಎಂದು ಗ್ರಾಮಸ್ಥರೆದುರು ಕ್ಷಮೆ ಕೋರಿದ ಪ್ರಸಂಗವೂ ನಡೆಯಿತು.

ಎರಡು ಪ್ರತ್ಯೇಕ ಸ್ಥಳದಲ್ಲಿ ಸುರಿಯಲಾಗಿದ್ದ ಕಸವನ್ನು ಅವರಿಂದಲೇ ತೆಗೆಸಿದ ಗ್ರಾಮಸ್ಥರು, ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರವಾಗಿ ಮಡಿಕೇರಿ ಗ್ರಾಮಾಂತರ ಠಾಣೆಗೆ ವಿಷಯ ತಿಳಿಸಿದ ಮೇರೆಗೆ ಅಪರಾಧ ವಿಭಾಗದ ಎಸ್‍ಐ ಶಿವನಗೌಡ ಪಾಟೀಲ್, ಎಎಸ್‍ಐ ಮಾಚಯ್ಯ ಆಗಮಿಸಿ ಪರಿಶೀಲನೆ ನಡೆಸಿದರು. ಲೋಡ್ ಮಾಡಿದ ಕಸವನ್ನು ತಮ್ಮ ಸ್ಥಳದಲ್ಲೇ ವಿಲೇವಾರಿ ಮಾಡುವುದಾಗಿ ಹೇಳಿದ ಕಿಶೋರ್ ಲಾರಿಯನ್ನು ಗ್ಯಾರೇಜ್‍ನ ಬಳಿ ನಿಲ್ಲಿಸಿದ್ದು, ಅದನ್ನು ಗುಂಡಿ ತೆಗೆದು ಹೂತು ಹಾಕುವುದು ಅಥವಾ ಸುಟ್ಟು ಹಾಕದಂತೆ ಮರಗೋಡು ಪಂಚಾಯಿತಿ ಎಚ್ಚರಿಕೆ ನೀಡಿದೆ. ಕಸವನ್ನು ವಿಂಗಡನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದು ಮರಗೋಡು ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಂಜನ್ ಮೂರ್ತಿ ತಿಳಿಸಿದ್ದಾರೆ.ರಸ್ತೆ ತುಂಬ ಹರಡುತ್ತಿದ್ದ ತ್ಯಾಜ್ಯ...

ಗ್ಯಾರೇಜ್‍ನ ಆಯಿಲ್ ಮಿಶ್ರಿತ ತ್ಯಾಜ್ಯವೇ ಹೆಚ್ಚಿತ್ತು. ಹಳೆ ಬಾಟಲಿ, ವಾಹನದ ಬಿಡಿ ಭಾಗಗಳು, ಮದ್ಯದ ಬಾಟಲಿಗಳು ಕೂಡಾ ಇದ್ದವು. ಕಸ ಸುರಿದಿದ್ದ ಪ್ರದೇದಲ್ಲಿ ಮಂಗಗಳು ಕೂಡಾ ಹೆಚ್ಚಾಗಿದ್ದು, ಸಾರ್ವಜನಿಕರು ಈ ಬಗ್ಗೆ ಮುತುವರ್ಜಿ ವಹಿಸದಿದ್ದರೆ ಮಂಗಗಳು ಅವುಗಳನ್ನೆಲ್ಲ ಎಳೆದು ಚೆಲ್ಲಾಪಿಲ್ಲಿ ಮಾಡಿಬಿಡುತ್ತಿದ್ದವು. ವೇಸ್ಟ್ ಆಯಿಲ್ ಪ್ರಮಾಣ ಹೆಚ್ಚಿದ್ದರಿಂದ ವಾಹನ ಸವಾರರು ಸಮಸ್ಯೆ ಎದುರಿಸಬೇಕಾಗುತ್ತಿತ್ತು. ಗ್ರಾಮಸ್ಥರ ಕಾಳಜಿಯಿಂದ ಇದು ತಪ್ಪಿದೆ.

ಪ್ರತಿ ಪಂಚಾಯಿತಿಯಲ್ಲಿ ಕಸ ವಿಲೇವಾರಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. ಆಯುಧ ಪೂಜೆಗೆ ಅಂಗಡಿ ಸ್ವಚ್ಛ ಮಾಡಿ ಲೋಡ್‍ಗಟ್ಟಲೆ ತ್ಯಾಜ್ಯವನ್ನು ಸಾರ್ವಜನಿಕರ ಸ್ಥಳದಲ್ಲಿ ಸುರಿದಿರುವುದು ಎಷ್ಟು ಸರಿ. ಇಂಥ ಪ್ರಕರಣಗಳು ಮರುಕಳಿಸಬಾರದು. ಹೀಗಾಗಿ ಕಸ ಸುರಿದವರಿಂದಲೇ ಸ್ವಚ್ಛ ಮಾಡಿಸಿದ್ದೇವೆ. ಇಡೀ ಜಿಲ್ಲೆಗೆ ಇದು ಮಾದರಿಯಾಗಬೇಕು. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.

-ಮಾದೇಟಿರ ತಿಮ್ಮಯ್ಯ, ಕಡಗದಾಳು ಗ್ರಾಪಂ ಮಾಜಿ ಅಧ್ಯಕ್ಷ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ತ್ಯಾಜ್ಯವನ್ನು ಲಾರಿಯಲ್ಲಿ ತಂದು ಗ್ಯಾರೇಜ್‍ನಲ್ಲಿ ನಿಲ್ಲಿಸಿದ್ದಾರೆ. ಅದನ್ನು ಬೇರೆ ಕಡೆ ವಿಲೇವಾರಿ ಮಾಡದಂತೆ ಸೂಚಿಸಿದ್ದೇನೆ. ಸುಡುವುದಾಗಲಿ, ಮಣ್ಣಿನಡಿ ಹೂತು ಹಾಕುವುದಾಗಲಿ ಮಾಡದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ತ್ಯಾಜ್ಯ ಮರುವಿಂಗಡಣೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಪಂಚಾಯಿತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

-ಅಂಜನ್ ಮೂರ್ತಿ, ಪಿಡಿಒ, ಮರಗೋಡು ಗ್ರಾಪಂ.