ಸೋಮವಾರಪೇಟೆ, ಅ. 24: ತಾ. 25ರಂದು ನಡೆಯುವ ಆಯುಧ ಪೂಜೋತ್ಸವಕ್ಕೆ ಸೋಮವಾರಪೇಟೆ ಪಟ್ಟಣದಲ್ಲಿ ಖರೀದಿಯ ಭರಾಟೆ ಜೋರಾಗಿತ್ತು.
ಸಂಜೆ ವೇಳೆಗೆ ಪಟ್ಟಣದಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು. ಆಯುಧ ಪೂಜೋತ್ಸವಕ್ಕಾಗಿ ಪೂಜಾ ಸಾಮಗ್ರಿ, ವಾಹನ ಪೂಜೆಗಾಗಿ ಬೂದು ಕುಂಬಳಕಾಯಿ, ಲಿಂಬೆಹಣ್ಣು, ಕಬ್ಬು, ಹೂವುಗಳ ಮಾರಾಟ ಹೆಚ್ಚು ನಡೆಯಿತು.
ಇದರೊಂದಿಗೆ ಪಟ್ಟಣದ ವರ್ಕ್‍ಶಾಪ್‍ಗಳು, ಅಂಗಡಿಗಳನ್ನು ಶುಚಿಗೊಳಿಸುವ ಕಾರ್ಯದಲ್ಲಿ ವರ್ತಕರು ತೊಡಗಿದ್ದರು. ಪಟ್ಟಣದಲ್ಲಿ ಒಂದು ಮಾರು ಹೂವಿಗೆ 80 ರಿಂದ 100 ರೂಪಾಯಿ, ಬೂದುಕುಂಬಳಕಾಯಿ ಕೆ.ಜಿ.ಗೆ 35ರಂತೆ ಮಾರಾಟವಾಯಿತು. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ವ್ಯಾಪಾರದ ಭರಾಟೆ ಜೋರಾಗಿತ್ತು.