ಅಮ್ಮತ್ತಿ, ಅ. 23: ಎಸ್ ವಿಂಗ್ ಎಮ್ಮೆಮಾಡು ಇದರ ವತಿಯಿಂದ ಪ್ರವಾದಿ ಪೈಗಂಬರ್ (ಸ.ಅ) ಅವರ ಜನ್ಮ ದಿನಾಚರಣೆಯ ಪ್ರಯುಕ್ತ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ನಡೆಸಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, 3000 ಪದಗಳಿಗಿಂತ ಹೆಚ್ಚಾಗಬಾರದು. ತಾ. 30 ರೊಳಗೆ ಇ-ಮೇಲ್ ಥಿesತಿiಟಿgಥಿmಜ@gmಚಿiಟ.ಛಿom, ಅಥವಾ ವಾಟ್ಸಾಪ್ 99800 03480 ಸಂಖ್ಯೆಗೆ ಪ್ರಬಂಧ ಪಿ.ಡಿ.ಎಫ್. ವಿನ್ಯಾಸದಲ್ಲಿ ಕಳುಹಿಸಬೇಕು.

‘ಉತ್ತಮ ಸಮಾಜವೊಂದರ ನಿರ್ಮಾಣಕ್ಕೆ ಪೈಗಂಬರ್ ಸಂದೇಶಗಳು’, ಅಥವಾ ‘ಪ್ರವಾದಿ (ಸ.ಅ) ಅವರ ಅತ್ಯುತ್ತಮ ಮಾದರಿ ಜೀವನ’ ಈ 2 ವಿಷಯಗಳ ಕುರಿತು ಪ್ರಬಂಧ ರಚನೆಗೆ ಅವಕಾಶವಿದೆ.