ಮಡಿಕೇರಿ, ಅ. 23: ನೂತನವಾಗಿ ಇನ್ನಷ್ಟೆ ಕಾರ್ಯಚಟುವಟಿಕೆ ಆರಂಭಿಸಬೇಕಿರುವ ಪೊನ್ನಂಪೇಟೆ ತಾಲೂಕು ಕಚೇರಿ ಕಟ್ಟಡ ಸ್ಥಳಕ್ಕೆ ನಿನ್ನೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ವೀರಾಜಪೇಟೆ ತಾಲೂಕು ತಹಶೀಲ್ದಾರ್ ನಂದೀಶ್ ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದ ಅವರು ತಾಲೂಕು ಹೋರಾಟ ಸಮಿತಿ ಪ್ರಮುಖರೊಂದಿಗೂ ಚರ್ಚಿಸಿದರು. ಕಚೇರಿ ಕಾರ್ಯಕ್ಕೆ ಅಗತ್ಯವಿರುವ ಕೆಲಸಗಳ ಬಗ್ಗೆ ಮಾಹಿತಿ ಪಡೆದು ಇದರ ತ್ವರಿತಗತಿಗೆ ಅವರು ಸೂಚಿಸಿದರು. ಅಗತ್ಯ ಮಾಹಿತಿಗಳನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಲಾಗಿದೆ. ಸಚಿವರು, ಜನಪ್ರತಿನಿಧಿಗಳ ಸಲಹೆ ಪಡೆದು ಉದ್ಘಾಟನೆಗೆ ದಿನಾಂಕ ನಿಗದಿ ಪಡಿಸುವದಾಗಿ ತಿಳಿಸಿದರು. ಈ ಸಂದರ್ಭ ಪ್ರಮುಖರಾದ ಎಂ. ಎಸ್. ಕುಶಾಲಪ್ಪ, ಕೆ.ಸಿ. ಲಾಲಪ್ಪ, ಎರ್ಮು ಹಾಜಿ, ಜಿಮ್ಮಿ ಅಣ್ಣಯ್ಯ, ಅಪ್ಪಚ್ಚು, ಹ್ಯಾರಿಸ್ ಮತ್ತಿತರರು ಹಾಜರಿದ್ದರು.