ಕಣಿವೆ, ಅ. 23: ಕೊಡಗು ಜಿಲ್ಲೆಯ ಉತ್ತರದ ಮತ್ತೊಂದು ಗಡಿ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿರುವ ಶಿರಂಗಾಲದ ಅರಣ್ಯ ತಪಾಸಣಾ ಕೇಂದ್ರ ಇದ್ದೂ ಇಲ್ಲದ ಸ್ಥಿತಿಯಲ್ಲಿ ಇದೆ.

ಸಿಬ್ಬಂದಿಗಳ ಕೊರತೆ ಹಾಗೂ ಕಾರ್ಯನಿರ್ವಹಣೆ ಇಲ್ಲಿ ಎದ್ದು ಕಾಣುತ್ತಿದೆ. ಹಾಸನ ಜಿಲ್ಲೆಯ ಕಡೆಯಿಂದ ಕೊಡಗಿಗೆ ಪ್ರವೇಶ ಕಲ್ಪಿಸುವ ಮತ್ತು ಕೊಡಗು ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಗಡಿಯಂಚಿನ ಗ್ರಾಮದಲ್ಲಿ ಅರಣ್ಯ ಇಲಾಖೆ ಅರಣ್ಯ ತಪಾಸಣಾ ಘಟಕವನ್ನು ತೆರೆದಿದ್ದರೂ ಹಗಲಾಗಲೀ, ರಾತ್ರಿಯ ಸಮಯವಾಗಲೀ ಇಲ್ಲಿ ಯಾವುದೇ ಸಿಬ್ಬಂದಿಗಳು ಕೂಡ ಯಾವುದೇ ವಾಹನಗಳನ್ನು ತಪಾಸಣೆ ಮಾಡಿ ಬಿಡುವ ಪರಿಪಾಠವನ್ನೇ ಹೊಂದಿಲ್ಲ ಎಂಬುದು ಇಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಗೋಚರ ವಾಗುತ್ತದೆ.

ಜಿಲ್ಲೆಯಲ್ಲಿ ಮರಗಳನ್ನು ಮನಬಂದಂತೆ ಕಡಿದುರುಳಿಸುವ ಮತ್ತು ಬೇರೆಡೆಗೆ ಸಾಗಿಸುವುದು ಅಕ್ಷಮ್ಯ ಅಪರಾಧವಾಗಿರುವ ಕಾರಣದಿಂದ ಅರಣ್ಯ ಕಾನೂನು ಕಠಿಣವಾಗಿರುವ ಹಿನ್ನೆಲೆಯಲ್ಲಿ, ಕಣಿವೆ, ಅ. 23: ಕೊಡಗು ಜಿಲ್ಲೆಯ ಉತ್ತರದ ಮತ್ತೊಂದು ಗಡಿ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿರುವ ಶಿರಂಗಾಲದ ಅರಣ್ಯ ತಪಾಸಣಾ ಕೇಂದ್ರ ಇದ್ದೂ ಇಲ್ಲದ ಸ್ಥಿತಿಯಲ್ಲಿ ಇದೆ.

ಸಿಬ್ಬಂದಿಗಳ ಕೊರತೆ ಹಾಗೂ ಕಾರ್ಯನಿರ್ವಹಣೆ ಇಲ್ಲಿ ಎದ್ದು ಕಾಣುತ್ತಿದೆ. ಹಾಸನ ಜಿಲ್ಲೆಯ ಕಡೆಯಿಂದ ಕೊಡಗಿಗೆ ಪ್ರವೇಶ ಕಲ್ಪಿಸುವ ಮತ್ತು ಕೊಡಗು ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಗಡಿಯಂಚಿನ ಗ್ರಾಮದಲ್ಲಿ ಅರಣ್ಯ ಇಲಾಖೆ ಅರಣ್ಯ ತಪಾಸಣಾ ಘಟಕವನ್ನು ತೆರೆದಿದ್ದರೂ ಹಗಲಾಗಲೀ, ರಾತ್ರಿಯ ಸಮಯವಾಗಲೀ ಇಲ್ಲಿ ಯಾವುದೇ ಸಿಬ್ಬಂದಿಗಳು ಕೂಡ ಯಾವುದೇ ವಾಹನಗಳನ್ನು ತಪಾಸಣೆ ಮಾಡಿ ಬಿಡುವ ಪರಿಪಾಠವನ್ನೇ ಹೊಂದಿಲ್ಲ ಎಂಬುದು ಇಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಗೋಚರ ವಾಗುತ್ತದೆ.

ಜಿಲ್ಲೆಯಲ್ಲಿ ಮರಗಳನ್ನು ಮನಬಂದಂತೆ ಕಡಿದುರುಳಿಸುವ ಮತ್ತು ಬೇರೆಡೆಗೆ ಸಾಗಿಸುವುದು ಅಕ್ಷಮ್ಯ ಅಪರಾಧವಾಗಿರುವ ಕಾರಣದಿಂದ ಅರಣ್ಯ ಕಾನೂನು ಕಠಿಣವಾಗಿರುವ ಹಿನ್ನೆಲೆಯಲ್ಲಿ, ಎನ್ನುತ್ತಾರೆ. ಆದರೆ ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಇದೂವರೆಗೂ ಒಂದೇ ಒಂದು ಮರ ಸಾಗಾಟದ ವಾಹನಗಳನ್ನು ಹಿಡಿಯುವುದಾಗಲೀ, ಮರಗಳ್ಳರನ್ನು ಹಿಡಿವುದಾಗಲೀ ಮಾಡಿಲ್ಲ. ಅಂದರೆ ಈ ಶಿರಂಗಾಲ ಗೇಟ್‍ನಲ್ಲಿ ಯಾವುದೇ ವಾಹನಗಳಲ್ಲಿ ಯಾವುದೇ ವ್ಯಕ್ತಿಗಳು ಯಾವುದೇ ಮರದ ನಾಟಾಗಳನ್ನು ಸರಬರಾಜು ಮಾಡಿಲ್ಲ ಎಂದು ತಿಳಿಯಬೇಕೇ ? ಎಂಬುದು ಸ್ಥಳೀಯರ ಪ್ರಶ್ನೆ.

ಹಾಗೊಂದು ವೇಳೆ ಮರಗಳ್ಳತನಗಳು ಜರುಗುವುದಿಲ್ಲ ಎಂದಾದರೇ ಇಲ್ಲಿ ಸಿಬ್ಬಂದಿಗಳ ನೇಮಕದ ಅಗತ್ಯವೂ ಇಲ್ಲ. ಅರಣ್ಯ ತಪಾಸಣಾ ಕೇಂದ್ರದ ಅನಿವಾರ್ಯತೆಯೂ ಇಲ್ಲವಲ್ಲವೇ ? ಎಂಬುದು ಸಾರ್ವಜನಿಕರ ಅಂಬೋಣ.

ಈ ಶಿರಂಗಾಲ ಗೇಟಿನ ಅರಣ್ಯ ತಪಾಸಣಾ ಕೇಂದ್ರದಲ್ಲಿ ದುಷ್ಕರ್ಮಿಗಳು ಅಥವಾ ಆಗಂತುಕರ ವಾಹನಗಳನ್ನು ಕ್ಷಣಾರ್ಧದಲ್ಲಿ ತಡೆದು ನಿಲ್ಲಿಸಲು ಅನುಕೂಲ ವಾಗುವಂತೆ ಒಂದು ಬೃಹತ್ ಗಾತ್ರ ಮತ್ತು ಎತ್ತರದ ಕಂಬವನ್ನು ಅಡ್ಡಲಾಗಿಟ್ಟು ಮೇಲೆತ್ತಿ ಇಳಿಸುವ ಗೇಟ್ ಇತ್ತಾದರೂ ಅದನ್ನು ಇಳಿಸಿ ಏರಿಸುವ ಸಿಬ್ಬಂದಿಗಳಿಲ್ಲ ಎಂದು ಆ ಮರದ ಕಂಬವನ್ನು ತೆಗೆದು ಇಟ್ಟು, ಪೆÇಲೀಸರು ಬಳಸುವ ಕಬ್ಬಿಣದ ಎರಡು ಬ್ಯಾರಿಕೇಡ್‍ಗಳನ್ನು ಇಲ್ಲಿ ಅಳವಡಿಸಲಾಗಿದೆ. ಕೊಡಗು ಜಿಲ್ಲೆಯ ಗಡಿ ಪ್ರದೇಶಗಳಾದ ಸಂಪಾಜೆ, ಮಾಕುಟ್ಟ, ಆನೆಚೌಕೂರು ಹಾಗೂ ಕುಶಾಲನಗರದ ಕಾವೇರಿ ನದಿ ದಂಡೆಯ ಬಳಿ ಅಳವಡಿಸಿರುವ ರೀತಿಯಲ್ಲಿ ಶಿಸ್ತುಬದ್ಧವಾದ ಹಾಗೂ ಕ್ರಮಬದ್ಧವಾದ ಏರಿಳಿಕೆಯ ಗೇಟನ್ನು ಕುಶಾಲನಗರ ಬಳಿಯ ಶಿರಂಗಾಲದಲ್ಲಿ, ಶನಿವಾರಸಂತೆ ಬಳಿಯ ಹಿಪ್ಪಲಿ ಹಾಗೂ ಕೊಡ್ಲಿಪೇಟೆಯ ಹೇಮಾವತಿ ಸೇತುವೆ ಬಳಿ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಬೇಕಿದೆ. ಆ ಮೂಲಕ ಕದ್ದು ಸಾಗಿಸುವ ಮರಗಳು ಹಾಗೂ ಮರಗಳ್ಳರನ್ನು ಬಂಧಿಸಿ ಕೊಡಗಿನ ಹಸಿರ ಪರಿಸರವನ್ನು ಉಳಿಸಲು ಅರಣ್ಯ ಇಲಾಖೆ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. - ಕೆ.ಎಸ್. ಮೂರ್ತಿ