ಮಡಿಕೇರಿ, ಅ. 23: ಹೆಸರು - ಅಭಿಮನ್ಯು, ವಯಸ್ಸು - 54, ವಾಸ - ಮತ್ತಿಗೋಡು ಕ್ಯಾಂಪ್, ಕೊಡಗು., ತೂಕ- 5,290 ಕೆ.ಜಿ., ಸಾಧನೆ - 125 ಕ್ಕೂ ಅಧಿಕ ಕಾಡಾನೆಗಳು, 12 ಧಾಳಿಕೋರ ಹುಲಿಗಳ ಸೆರೆ ಕಾರ್ಯಾಚರಣೆಯ ನೇತೃತ್ವ., ಗುಣ - ನಡತೆ - ಅತ್ಯಂತ ವಿಧೇಯ. ಬಲಿಷ್ಟತೆಯೊಂದಿಗೆ, ಎದುರಾಳಿಗಳ ಪಾಲಿಗೆ ನಡುಕ ಹುಟ್ಟಿಸಬಲ್ಲ ಕಿಚ್ಚಿನ ಸ್ವಭಾವ. ಸ್ವಯಂ ತೀರ್ಮಾನ ಕೈಗೊಳ್ಳುವ ವಿಶೇಷ ಗುಣ. ದಟ್ಟ ಕಾಡಿನೊಳಗೆ ಈತನೇ ಮಹಾರಾಜ., ಹಿರಿಮೆ - ಕನ್ನಡ ನಾಡಿನ ಕಾಡುಗಳಲ್ಲಿನ ಯಶಸ್ವಿ ಕಾರ್ಯಾಚರಣೆಗೆ ಈತನಿಗೆ ಈತನೇ ಸಾಟಿ. ಇತಿಹಾಸದಲ್ಲಿ ಬಲರಾಮನ ಬಳಿಕ ಕೊಡಗಿನಿಂದ ಅಂಬಾರಿ ಹೊರುವ ಎರಡನೇ ಆನೆಯಾಗಿ ಸೋಮವಾರ ಅಭಿಮನ್ಯು ನಾಡಹಬ್ಬದ ದಾಖಲೆಯ ಪುಟಕ್ಕೆ ಸೇರ್ಪಡೆಯಾಗಲಿದ್ದಾನೆ. ಈ ಮೂಲಕ ಕೊಡಗಿನ ಹಿರಿಮೆಯನ್ನು ವಿಶ್ವವ್ಯಾಪಿ ಅಭಿಮನ್ಯು ಸಾರಲಿದ್ದಾನೆ. ಎಲ್ಲರ ಗಮನ ಸೆಳೆಯುವಂತೆ ಬಲಿಷ್ಠನಾಗಿರುವ ಅಭಿಮನ್ಯು ಪಾಲಿಗೆ ತಾನು ಬೆಳೆದ ವೀರಪರಂಪರೆಯ ಕೊಡಗಿನ ಮಣ್ಣಿನ ಗುಣವೇ ಬೃಹತ್ ದೇಹದಲ್ಲಿಯೂ ಹಾಸುಹೊಕ್ಕಾಗಿರುವಂತಿದೆ. ಹೆಸರಿಗೆ ತಕ್ಕಂತೆ ಮಹಾಭಾರತದ ಪಾತ್ರದಂತೆ ಕೆಚ್ಚಿನ ಜೀವಿ. ಸವಾಲಿನ ಚಕ್ರವ್ಯೂಹವನ್ನು ಭೇದಿಸುವುದರಲ್ಲಿ ಅಭಿಮನ್ಯುಗೆ ಈತನೇ ಸರಿಸಾಟಿ. ಹೀಗಾಗಿಯೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಭಿಮನ್ಯುವಿನ ಧೈರ್ಯ ಕಂಡರೆ ಬಹಳ ಅಭಿಮಾನ. ಅಭಿಮನ್ಯು ಎಂದರೆ ಕನ್ನಡಿಗರ ಅಚ್ಚುಮೆಚ್ಚು, ಪರರಾಜ್ಯದವರಿಗೆ ಹೊಟ್ಟೆಕಿಚ್ಚು.!

ದೇಶದ ಯಾವುದೇ ಪ್ರದೇಶದಲ್ಲಿ ಕಾಡಾನೆ ದಾಳಿಯ ಪ್ರಕರಣಗಳಲ್ಲಿ ದಾಂಧಲೆ ನಿರತ ಆನೆಗಳ ಸೆರೆಗೆ ಕರ್ನಾಟಕದಿಂದ ತೆರಳುವ ಸಾಕಾನೆಗಳ ಪಟ್ಟಿಯಲ್ಲಿ ಮೊದಲ ಹೆಸರೇ ಅಭಿಮನ್ಯು.

ಹೀಗಾಗಿಯೇ ಛತ್ತೀಸ್‍ಗಡ್‍ನ ಸರ್ಗಜಿ ಎಂಬ ಗ್ರಾಮದಲ್ಲಿ ದಾಂಧಲೆಕೋರರಾಗಿ ಗ್ರಾಮಸ್ಥರು ಜೀವಭಯ ಎದುರಿಸಿದ್ದ 22 ಧಾಳಿಕೋರ ಕಾಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿಯೂ ಕನ್ನಡ ನಾಡಿನ ಹೆಮ್ಮೆಯ ಅಭಿಮನ್ಯು ಮುಂಚೂಣಿಯಲ್ಲಿದ್ದು ಅಷ್ಟೂ ಕಾಡಾನೆಗಳನ್ನು ಸೆರೆಹಿಡಿದಿದ್ದ. ಗೋವಾ, ಒರಿಸ್ಸಾ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವೆಡೆ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಕೊಡಗಿನ ಈ ವೀರ ಪ್ರಮುಖ ಪಾತ್ರ ವಹಿಸಿದ್ದ. ಸಾಕಾನೆಗಳ ಪೈಕಿ ಕೊಡುವುದಿದ್ದರೆ ಅಭಿಮನ್ಯುವನ್ನೇ ಕೊಡಿ ಎಂದು ಕೆಲವು ರಾಜ್ಯಗಳು ಬೇಡಿಕೆಯಿಟ್ಟಿದ್ದವು.. ಹೀಗಿದೆ ನಮ್ಮ ನೆಲದ ಅಭಿಮನ್ಯುವಿನ ಕೀರ್ತಿ.

1977ರಲ್ಲಿ ಕೊಡಗು ಜಿಲ್ಲೆಯ ಕಲ್ಲಳ್ಳ ಎಂಬಲ್ಲಿ ದಾಂಧಲೆನಿರತನಾಗಿದ್ದ ಈ ಪುಂಡಾನೆಯನ್ನು ಖೆಡ್ಡಾ ಕಾರ್ಯಾಚರಣೆ ಮೂಲಕ ಸೆರೆ ಹಿಡಿಯಬೇಕಾದರೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಟ್ಟ ಪಾಡು ಅಷ್ಟಿಷ್ಟಲ್ಲ. ಅಷ್ಟೊಂದು ಕೋಟಲೆ ಕೊಟ್ಟಿದ್ದ ಈ ಧಾಳಿಕೋರನನ್ನು ಹಳೇ ಶಿಬಿರವಾಗಿದ್ದ ಹೆಬ್ಬಾಲಕ್ಕೆ ಕರೆತಂದು ಕಟ್ಟಿಹಾಕಿದ್ದ ಮಾವುತ, ಕಾವಾಡಿಗಳಿಗೆ ಆಗಲೇ ಗೊತ್ತಾಗಿಬಿಟ್ಟಿತು ಇವನು ಅಸಮಾನ್ಯ, ಮುಂದೊಂದು ದಿನ ಆನೆಗಳಲ್ಲಿಯೇ ಅಗ್ರಮಾನ್ಯನಾಗುತ್ತಾನೆಂದು.

ಮೂರ್ಕಲ್ ಶಿಬಿರದಲ್ಲಿ ತರಬೇತಿ ನೀಡಿ 8 ವರ್ಷದ ಹಿಂದೆ ತಿತಿಮತಿ ಅರಣ್ಯ ವಲಯದ ಮತ್ತಿಗೋಡು ಸಾಕಾನೆ ತರಬೇತಿ ಕೇಂದ್ರಕ್ಕೆ ಅಭಿಮನ್ಯುವನ್ನು ಕರೆತರಲಾಯಿತು. .

ಹೀಗಾಗಿಯೇ ಇವನಿಗೆ ಅಭಿಮನ್ಯು ಎಂಬ ನಾಮಕರಣ ಮಾಡಲಾಯಿತು. ಸಣ್ಣಪ್ಪ ಎಂಬ ಮತ್ತಿಗೋಡು ಮಾವುತ ಅಭಿಮನ್ಯುವಿನ ತರಬೇತುದಾರನಾಗಿದ್ದರು.

(ಮೊದಲ ಪುಟದಿಂದ) ವರ್ಷಗಳ ಬಳಿಕ ತಂದೆ ಸಣ್ಣಪ್ಪ ಅಗಲಿಕೆಯ ತರುವಾಯ ಅಭಿಮನ್ಯು ಉಸ್ತುವಾರಿ ತನ್ನ ಹೆಗಲಿಗೆ ಬಂತು ಎಂದು ಹೇಳಿದ ಈಗಿನ ಮಾವುತ ಜೆ.ಎಸ್.ವಸಂತ, ಅಭಿಮನ್ಯು ನನ್ನ ಕುಟುಂಬದ ಸದಸ್ಯನಂತೆಯೇ ಆಗಿದ್ದಾನೆ. ಅವನ ಮೂಕ ಭಾವನೆ ನನಗೆ ಅರ್ಥವಾಗುತ್ತದೆ. ನನ್ನ ಮಾತು ಅವನಿಗೆ ಅರ್ಥವಾಗುತ್ತದೆ ಎನ್ನುತ್ತಾನೆ.

ಅಭಿಮನ್ಯು ಈವರೆಗೆ 125 ಕಾಡಾನೆಗಳನ್ನು ಸೆರೆಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. 12 ಹುಲಿಗಳ ಸೆರೆ ಕಾರ್ಯಾ ಚರಣೆಯಲ್ಲಿಯೂ ಈತನದ್ದೇ ಮುಂದಾಳತ್ವ. ದಟ್ಟ ಕಾಡಿನ ಸವಾಲಿನ ಕಾರ್ಯಾ ಚರಣೆಯಲ್ಲಿಯೂ ಸಾಹಸಮಯ ಚಕ್ರವ್ಯೂಹ ಭೇದಿಸಿ ಕಾರ್ಯಾ ಚರಣೆಯನ್ನು ಯಶಸ್ವಿಗೊಳಿಸಿ ಘೀಳಿಟ್ಟರೇ ಅಭಿಮನ್ಯುವಿಗೆ ತೃಪ್ತಿ. 23 ಸಾಕಾನೆಗಳಿರುವ ಮತ್ತಿಗೋಡಿನ ಸಾಕಾನೆ ತರಬೇತಿ ಕೇಂದ್ರದ ಅಗ್ರಗಣ್ಯ ಎಂಬ ಹಿರಿಮೆಯೂ ಆತನದ್ದು.

ಮೈಸೂರು ದಸರಾದಲ್ಲಿ ಶ್ರೀ ಮಾತೆ ಚಾಮುಂಡೇಶ್ವರಿಯ ವಿಗ್ರಹವಿರುವ 760 ಕೆ.ಜಿ. ತೂಕದ ಸಂಪೂರ್ಣ ಚಿನ್ನದಿಂದಲೇ ಮಾಡಿದ ಅಂಬಾರಿ ಹೊರುವುದೆಂದರೆ ತಮಾಷೆ ಮಾತಲ್ಲ. ವಿಶ್ವವಿಖ್ಯಾತವಾಗಿರುವ ಕನ್ನಡ ನಾಡಿನ ನಾಡಹಬ್ಬ ಮೈಸೂರಿನ ಐತಿಹಾಸಿಕ ದಸರಾದ ಕೇಂದ್ರ ಬಿಂದುವೇ ಅಂಬಾರಿ ಮೆರವಣಿಗೆ. ಕೊಂಚ ಎಡವಿದರೂ ತಲೆ ತಗ್ಗಿಸುವಂತಾಗುತ್ತದೆ. ಹೀಗಾಗಿಯೇ ಅಂಬಾರಿ ಹೊರಲು ಅತ್ಯಂತ ಸೂಕ್ತ ಗಜರಾಜನನ್ನೇ ಆಯ್ಕೆ ಮಾಡಲಾಗುತ್ತದೆ.

ಅರ್ಜುನ 8 ವರ್ಷಗಳ ಕಾಲ ಪಾರಂಪರಿಕ ಅಂಬಾರಿ ಹೊತ್ತು 60 ವರ್ಷ ತಲುಪುತ್ತಿರುವಂತೆಯೇ ನಿಯಮಾವಳಿ ಪ್ರಕಾರ ನಿವೃತ್ತನಾದ. ಕಳೆದ ವರ್ಷವೇ ಅಭಿಮನ್ಯು ಮೇಲೆ ಅಂಬಾರಿ ಹೊರಿಸಿ ತರಬೇತಿ ನೀಡಲಾಗಿತ್ತು. ಹೀಗಾಗಿ ಎಲ್ಲರ ಆಯ್ಕೆಯಂತೆ ಅಭಿಮನ್ಯು ಈ ವರ್ಷ ಮೊದಲ ಬಾರಿಗೆ ರಾಜಪರಂಪರೆಯ ನಾಡಹಬ್ಬದಲ್ಲಿ ನಾಡದೇವಿಯಿರುವ ಚಿನ್ನದ ಅಂಬಾರಿ ಹೊರುತ್ತಿದ್ದಾನೆ.

ವಿಪರ್ಯಾಸ ಎಂದರೆ ಕಳೆದ ಕೊಂಚ ಎಡವಿದರೂ ತಲೆ ತಗ್ಗಿಸುವಂತಾಗುತ್ತದೆ. ಹೀಗಾಗಿಯೇ ಅಂಬಾರಿ ಹೊರಲು ಅತ್ಯಂತ ಸೂಕ್ತ ಗಜರಾಜನನ್ನೇ ಆಯ್ಕೆ ಮಾಡಲಾಗುತ್ತದೆ.

ಅರ್ಜುನ 8 ವರ್ಷಗಳ ಕಾಲ ಪಾರಂಪರಿಕ ಅಂಬಾರಿ ಹೊತ್ತು 60 ವರ್ಷ ತಲುಪುತ್ತಿರುವಂತೆಯೇ ನಿಯಮಾವಳಿ ಪ್ರಕಾರ ನಿವೃತ್ತನಾದ. ಕಳೆದ ವರ್ಷವೇ ಅಭಿಮನ್ಯು ಮೇಲೆ ಅಂಬಾರಿ ಹೊರಿಸಿ ತರಬೇತಿ ನೀಡಲಾಗಿತ್ತು. ಹೀಗಾಗಿ ಎಲ್ಲರ ಆಯ್ಕೆಯಂತೆ ಅಭಿಮನ್ಯು ಈ ವರ್ಷ ಮೊದಲ ಬಾರಿಗೆ ರಾಜಪರಂಪರೆಯ ನಾಡಹಬ್ಬದಲ್ಲಿ ನಾಡದೇವಿಯಿರುವ ಚಿನ್ನದ ಅಂಬಾರಿ ಹೊರುತ್ತಿದ್ದಾನೆ.

ವಿಪರ್ಯಾಸ ಎಂದರೆ ಕಳೆದ ಮೈಸೂರಿನ ಅರಮನೆ ಅಂಗಣಕ್ಕೆ ಮಾತ್ರ ಸೀಮಿತವಾಗಿರುವ ದಸರಾ ಮಹೋತ್ಸವದಲ್ಲಿ ಕಾವೇರಿ, ವಿಜಯ, ವಿಕ್ರಮ, ಗೋಪಿ.. ಜತೆಗೂಡುತ್ತಿದ್ದಾರೆ. ಗಮನಾರ್ಹ ಎಂದರೆ ಈ ನಾಲ್ಕೂ ಆನೆಗಳು ಕೂಡ ಕೊಡಗಿನ ಆನೆಗಳಾಗಿದೆ ಎಂಬುದು.

ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಕೊಡಗಿನ ಇತರ ಆನೆಗಳು - ಕಾವೇರಿ, ವಿಜಯ, ಗೋಪಿ, ವಿಕ್ರಮ.

ಕಾವೇರಿ -44 ವರ್ಷ, 2,820 ಕೆ.ಜಿ. ಸೋಮವಾರಪೇಟೆ ಬಳಿಯ ಆಡಿನಾಡೂರು ಕಾಡಿನಲ್ಲಿ 2009 ರಲ್ಲಿ ಸೆರೆಸಿಕ್ಕಿದ ಆನೆ. ಜೆ.ಕೆ.ಡೋಬಿ, ರಾಘು ಹಾಲಿ ಮಾವುತ ಮತ್ತು ಕಾವಾಡಿಗಳು. ದುಬಾರೆ ಸಾಕಾನೆ ಶಿಬಿರದ ನಿವಾಸಿ ಈಕೆ.

ವಿಜಯ - 61 ವರ್ಷದ ಈ ಆನೆಯ ತೂಕ 2,770 ಕೆ.ಜಿ.. ಆನೆಕಾಡು ಶಿಬಿರದ ನಿವಾಸಿಯಾಗಿರುವ ವಿಜಯ 1963 ರಲ್ಲಿ ದುಬಾರೆ ಕಾಡಿನಲ್ಲಿ ಸೆರೆಹಿಡಿಯಲಾಗಿತ್ತು. ಬೋಜಪ್ಪ ಮತ್ತು ಅಣ್ಣಯ್ಯ ಮಾವುತ, ಕಾವಾಡಿ.

ಗೋಪಿ, - 37 ವರ್ಷ. 3,710 ಕೆ.ಜಿ.ತೂಕ. 1993 ರಲ್ಲಿ ಕಾರೆಕೊಪ್ಪದಲ್ಲಿ ಸೆರೆಸಿಕ್ಕ ಗೋಪಿ ದುಬಾರೆ ಶಿಬಿರದ ನಿವಾಸಿ. ಸರಿ ಮಾವುತನಾಗಿದ್ದರೆ ಅಪ್ಪಯ್ಯ ಕಾವಾಡಿ.

ವಿಕ್ರಮ - 46 ವರ್ಷದ ಆನೆಯ ತೂಕ 3,820 ಕೆ.ಜಿ. ಆನೆಕಾಡು ನಿವಾಸಿಯಾಗಿರುವ ವಿಕ್ರಮನನ್ನು ದೊಡ್ಡಬೆಟ್ಟ ಕಾಡಿನಲ್ಲಿ ಸೆರೆಹಿಡಿಯಲಾಗಿತ್ತು. ರಾಜಮಣಿ ಮತ್ತು ಹೇಮಂತ್ ಮಾವುತ, ಕಾವಾಡಿ.