ಚೆಟ್ಟಳ್ಳಿ, ಅ. 23: ಜಿಲ್ಲೆಯ ಮತ-ಲೌಕಿಕ ಸಮನ್ವಯ ವಿದ್ಯಾಭ್ಯಾಸ ಸಂಸ್ಥೆ ವೀರಾಜಪೇಟೆ ಅನ್ವಾರುಲ್ ಹುದಾ, ಇದರ ಸೌದಿ ಅರೇಬಿಯಾದ ಅನಿವಾಸಿ ಸಮಿತಿಗಳ, ಅನ್ವಾರುಲ್ ಹುದಾ ಸೌದಿ ರಾಷ್ಟ್ರೀಯ ಸಮಿತಿಯನ್ನು ರಚಿಸಲಾಗಿದೆ.
ಅನ್ವಾರುಲ್ ಹುದಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಹಂಝ ಮುಸ್ಲಿಯಾರ್ ಚೋಕಂಡಳ್ಳಿ ಅಧ್ಯಕ್ಷರಾಗಿ, ಅಬ್ದುಲ್ ಮಜೀದ್ ಚೇರಂಬಾಣೆ ಪ್ರಧಾನ ಕಾರ್ಯದರ್ಶಿಯಾಗಿ, ಹಂಝ ಹಾಜಿ ವೀರಾಜಪೇಟೆ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಯಾಗಿ ಷಂಶುದ್ದೀನ್ ಆಝಾದ್ ನಗರ ಹಾಗೂ ಮುಸ್ತಫಾ ಝೈನಿ ಕಂಬಿಬಾಣೆ ರಾಷ್ಟ್ರೀಯ ಸಮಿತಿಯನ್ನು ಸಂಸ್ಥೆಯ ಕೇಂದ್ರ ಸಮಿತಿ ಉಪಾಧ್ಯಕ್ಷ ಸಯ್ಯಿದ್ ಶಾಫಿ ಬಾಹಲವೀ ಮದೀನಾ ಮುನವ್ವರ ಅಧಿಕೃತವಾಗಿ ಘೋಷಣೆ ಮಾಡಿದರು. ಸಲಹಾ ಸಮಿತಿ ಚೇರ್ಮನ್ ಆಗಿ ಅಬ್ದುಲ್ ಜಲೀಲ್ ಸಖಾಫಿ ಕಡಂಗ ಆಯ್ಕೆಯಾದರು. ಸಲಹಾ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.