ಮಡಿಕೇರಿ, ಅ. 23: ರಾಜ್ಯದ 117 ಪುರಸಭೆಗಳ ಮತ್ತು 100 ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಅಧಿಸೂಚನೆಗೆ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿದೆ.ಇದೀಗ ಈ ಸ್ಥಾನಗಳಿಗೆ ನ. 10ರ ಒಳಗೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ಇದರಂತೆ ಚುನಾವಣೆ ನಡೆಸಲು ನಿಗದಿತ ದಿನಾಂಕದೊಳಗೆ ಕ್ರಮಕೈಗೊಳ್ಳುವಂತೆ ಸರಕಾರದ ಅಧೀನ ಕಾರ್ಯದರ್ಶಿ (ನಗರಾಭಿವೃದ್ಧಿ) ಎ. ವಿಜಯ ಕುಮಾರ್ ಅವರು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.(ಮೊದಲ ಪುಟದಿಂದ)
ದಿನಾಂಕ ನಿಗದಿಮೀಸಲಾತಿ ತಡೆಯಾಜ್ಞೆ ತೆರವುಗೊಂಡ ಹಿನ್ನೆಲೆ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ದಿನಾಂಕ ನಿಗದಿಪಡಿಸಲಾಗಿದೆ.
ನವೆಂಬರ್ 3 ರಂದು ಬೆ. 10 ಗಂಟೆಗೆ ಕುಶಾಲನಗರ ಪ.ಪಂ.ಗೆ, ಮಧ್ಯಾಹ್ನ 3 ಗಂಟೆಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ತಹಶೀಲ್ದಾರ್ ಗೋವಿಂದರಾಜು ಆದೇಶ ಹೊರಡಿಸಿದ್ದಾರೆ.