ಸುಂಟಿಕೊಪ್ಪ, ಅ. 23: ಸಮೀಪದ ಟಾಟಾ ಕಾಫಿ ತೋಟದ ಲೈನ್ ಮನೆಯಲ್ಲಿ ಗೃಹಣಿಯೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ. ಇಲ್ಲಿನ ಸ್ವಸ್ಥ ಪುನರ್ವಸತಿ ಕೇಂದ್ರದಲ್ಲಿ ಸಿಬಿಆರ್ ಆಗಿ ಕಾರ್ಯನಿರ್ವಹಿಸುತ್ತ್ತಿದ್ದ ಮುರುಗೇಶ್ ಅವರ ಪತ್ನಿ ಕಾವ್ಯ (23) ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಸಂಜೆ ವೇಳೆ ಮನೆಯ ಮೇಲಿನ ಮರದ ಹಲಗೆಗೆ ಸೀರೆಯನ್ನು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳೀಯರು ಪೊಲೀಸರಿಗೆ ತಿಳಿಸಿದ ಮೇರೆ ಠಾಣಾಧಿಕಾರಿ ವೆಂಕಟರಮಣ, ದಿಲೀಪ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.