ಮಡಿಕೇರಿ, ಅ. 23: ಗುರುಕುಲ ಕಲಾ ತುಮಕೂರು, ಇದರ ಕೊಡಗು ಜಿಲ್ಲಾ ಘಟಕದಲ್ಲಿ ತಾ. 17 ರಂದು ಆನ್‍ಲೈನ್ ಮುಖಾಂತರ ಕಾವೇರಿ ಸಂಕ್ರಮಣದ ಆಚರಣೆ ಜಿಲ್ಲಾಧ್ಯಕ್ಷೆ ಕೆಂಚೆಟ್ಟಿ ಶೋಭಾ ರಕ್ಷಿತ್ ಅವರು ಪ್ರಾರ್ಥನೆ ಮಾಡಿದರು.

ನಂದಿನಿ ಗಣೇಶ್ ಅವರ ‘ತಲಕಾವೇರಿ ಸ್ಥಳ ಮಹಾತ್ಮೆ’ ಲೇಖನವನ್ನು ಪ್ರದರ್ಶಿಸಲಾಯಿತು. ಚೆಂಬು ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ದೀಪಿಕಾ ಮತ್ತು ಇಂಚರಾ ಅವರಿಂದ ಪ್ರಾರ್ಥನೆ ಗೀತೆ ನೆರವೇರಿತು.

ಕೊಡಗು ಘಟಕದ ಗೌರವಾಧ್ಯಕ್ಷೆ ಉಳುವಂಗಡ ಕಾವೇರಿ ಉದಯ ತುಲಾಸಂಕ್ರಮಣದ ಆಚರಣೆಯನ್ನು ತಿಳಿಸಿರುವ ವೀಡಿಯೋವನ್ನು ಪ್ರದರ್ಶಿಸಲಾಯಿತು. ತಾ. 11 ರಂದು ಏರ್ಪಡಿಸಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಗೆ ಬಂದಿದ್ದ 73 ಕವನಗಳಿಗೆ ವಿಮರ್ಶೆಗಳನ್ನು ನೀಡಲಾಯಿತು. ರಾಜ್ಯ ಕಾರ್ಯಾಧ್ಯಕ್ಷ ಡಾ. ಶಿವರಾಜ್‍ಗೌಡ ಅವರು ಕೊಡಗಿನ ಆಚಾರ-ವಿಚಾರ ಹಾಗೂ ಸಂಸ್ಕøತಿಯ ಬಗ್ಗೆ ಮಾಡಿದ ಭಾಷಣ ಪ್ರಸಾರವಾಯಿತು.

ಮುಖ್ಯ ಅತಿಥಿಗಳಾಗಿ ಗುರುಕುಲ ಮೈಸೂರು ಘಟಕದ ಎಸ್. ಶಮಂತಕುಮಾರ್ ಭಾಗವಹಿಸಿ, ಕೊಡಗಿನ ಹಿರಿಮೆ-ಗರಿಮೆಗಳನ್ನು ಸಾರುವ ಕವನಗಳನ್ನು ವಾಚಿಸಿದರು. ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರತ್ರಗಳನ್ನು ನೀಡುವುದರ ಮೂಲಕ ಗೌರವಿಸಲಾಯಿತು.