*ಗೋಣಿಕೊಪ್ಪಲು, ಅ. 22: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗ ಹಾಗೂ ಪಂಗಡದ ಅಭಿವೃದ್ಧಿ ನಿಗಮ ಹಾಗೂ ವೀರಾಜಪೇಟೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಪಂಗಡದ ಸುಮಾರು 130ಕ್ಕೂ ಹೆಚ್ಚು ಫಲಾನುಭವಿಗಳಿಗೆ ಆಡುಗಳನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ವಿತರಿಸಿದರು.
ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಆವರಣದಲ್ಲಿ ರೇಷ್ಮೆ ಹಡ್ಲು, ನಿಟ್ಟೂರು, ನಾಣಚ್ಚಿ ಗದ್ದೆ ಹಾಡಿ, ಕಾರೆಹಡ್ಲು, ಮಜ್ಜಿಗೆ ಹಳ್ಳ ಫಾರಂ, ನೊಖ್ಯ ಗ್ರಾಮ, ದೇವರಪುರ ಗ್ರಾಮ, ಸಿದ್ದಾಪುರ, ಚೊಟ್ಟೆಪಾರೆ ಸೇರಿದಂತೆ ಹಲವು ಹಾಡಿಗಳ ಫಲಾನುಭವಿಗಳಿಗೆ ವಿಶೇಷ ಕೇಂದ್ರಿಯ ನೆರವಿನಡಿ ನೇರ ಸಾಲ ಯೋಜನೆಯ ಮುಖೇನ ಪ್ರತಿ ಫಲಾನುಭವಿಗೂ 4 ಆಡು ಮರಿಗಳನ್ನು ವಿತರಿಸಲಾಯಿತು.
ಒಟ್ಟು 40 ಸಾವಿರ ರೂಪಾಯಿ ಆದಾಯದಲ್ಲಿ 25 ಸಾವಿರ ರೂಪಾಯಿ ಸಬ್ಸಿಡಿ ಹಾಗೂ 15 ಸಾವಿರ ರೂಪಾಯಿ ಸಾಲ ಯೋಜನೆಯಡಿ ಯಲ್ಲಿ ಆಡಿನ ಮರಿಗಳನ್ನು ನೀಡಲಾಯಿತು. ಪ್ರಾಣಿ ಸಾಕಾಣಿಕೆ ರೈತನ ಆರ್ಥಿಕ ಅಭಿವೃದ್ಧಿಗೆ ಉತ್ತಮ ಯೋಜನೆಯಾಗಿದೆ. ಆಡು ಮರಿ ಗಳನ್ನು ಪಡೆದುಕೊಂಡ ಪ್ರತಿಯೊಬ್ಬ ಫಲಾನುಭವಿ ಇದನ್ನು ಮಾರಾಟ ಮಾಡದೇ ಉತ್ತಮವಾಗಿ ಬೆಳೆಸಿ ಆರ್ಥಿಕ ಬಲಾಡ್ಯಕ್ಕೆ ಮುಂದಾಗಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದರು.
ಇದೇ ಸಂದರ್ಭ ಮುಂದಿನ ಹಂತದಲ್ಲಿ ಹಸು ಸಾಕಾಣೆ ಹಾಗೂ ಹಂದಿ ಸಾಕಾಣೆ ಅಭಿವೃದ್ಧಿಗೆ ಪೂರಕವಾಗಿ ಹಸುಗಳು ಹಾಗೂ ಹಂದಿಗಳನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಂದೀಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಕುಮಾರ್, ತಾಲೂಕು ಅಧಿಕಾರಿ ಗುರುಶಾಂತಪ್ಪ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ಪಶು ವೈದ್ಯಾಧಿಕಾರಿ ತಮ್ಮಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಹಾಗೂ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.