ಮಡಿಕೇರಿ, ಅ. 22: ಇಲ್ಲಿನ ಮಹದೇವಪೇಟೆಯ ಶೇಖರ್ ಜ್ಯುವೆಲ್ಲರಿ ಮಾಲೀಕರ ಮನೆಯಲ್ಲಿ ನವರಾತ್ರಿಯ ಗೊಂಬೆ ಉತ್ಸವ ಸತತ ಮೂರನೇ ತಲೆಮಾರಿನಲ್ಲಿಯೂ ಮುಂದುವರಿದಿದೆ. ಜ್ಯುವೆಲ್ಲರಿ ಮಾಲೀಕರಾದ ಎಂ. ಈಶ್ವರ್ ಕುಮಾರ್, ತಾಯಿ ಅನಸೂಯಮ್ಮ ಅವರು ದಶಕಗಳ ಕಾಲ ಗೊಂಬೆ ಉತ್ಸವ ಏರ್ಪಡಿಸುತ್ತಾ ಬಂದಿದ್ದರು.ಅನಂತರದಲ್ಲಿ ಸೊಸೆಯಂದಿರು ಈ ಉತ್ಸವ ನಡೆಸುತ್ತಿದ್ದರು. ಪ್ರಸ್ತುತ ಮೂರನೆಯ ತಲೆಮಾರಿನಲ್ಲಿ ಈ ಮನೆಯ ಕಿರಿಯ ಸೊಸೆ ಶೃತಿ ಗೊಂಬೆಗಳ ಆರಾಧನೆಯೊಂದಿಗೆ ದೇವಿ ಮಾಹಾತ್ಮೆ ಪಾರಾಯಣ ಸಹಿತ ಪೂಜೆ ಸಲ್ಲಿಸುತ್ತಿರುವುದಾಗಿ ಕುಟುಂಬಸ್ಥರು ‘ಶಕ್ತಿ’ಯೊಂದಿಗೆ ಅನಿಸಿಕೆ ಹಂಚಿಕೊಂಡಿದ್ದಾರೆ.