ಸುಂಟಿಕೊಪ್ಪ, ಅ. 22: ಶ್ರೀಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನಕ್ಕೆ 25 ಸೆಂಟು ಜಾಗವನ್ನು ಉಚಿತವಾಗಿ ನೀಡಿದ ಗಣೇಶ್ ಮತ್ತು ಕುಟುಂಬದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಗಣೇಶ್ ಕುಟುಂಬದವರ ಪಾರ್ವತಮ್ಮ ಬಡಾವಣೆಯನ್ನು ಹೊಂದಿದ್ದು ದೇವಸ್ಥಾನ ಅಭಿವೃದ್ಧಿಗಾಗಿ 25 ಸೆಂಟು ಜಾಗವನ್ನು ದೇಣಿಗೆಯಾಗಿ ನೀಡಿದ್ದಾರೆ.

ನವರಾತ್ರಿಯ ವಿಶೇಷ ಪೂಜೆ ಹಿನ್ನೆಲೆ ಗಣೇಶ್ ಮತ್ತು ಕುಟುಂಬದವರನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೈ.ಎಂ. ಕರುಂಬಯ್ಯ, ಸದಸ್ಯರಾದ ಆರ್. ರಮೇಶ್ ಪಿಳ್ಳೆ, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕರಾದ ಮಂಜುನಾಥ್ ಉಡುಪ ಹಾಗೂ ಮುತ್ತಪ್ಪ ದೇವಸ್ಥಾನದ ಪೂಜಾರಿ ಶಿವರಾಮ್ ಸನ್ಮಾನಿಸಿದರು.