ಸುಂಟಿಕೊಪ್ಪ, ಅ. 22: ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ನವರಾತ್ರಿಯ 5ನೇ ದಿನವಾದ ಬುಧವಾರ ದೇವಿಗೆ ಭಕ್ತಾದಿಗಳ ಸಮ್ಮುಖದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.
ಚಾಮುಂಡೇಶ್ವರಿ ದೇವಾಲ ಯದ ಮುಖ್ಯ ಅರ್ಚಕ ಮಂಜುನಾಥ್ ಉಡುಪ ಅವರು ದೇವಿಗೆ ಬೆಳಿಗ್ಗೆಯಿಂದ ಆರತಿ ಪೂಜೆ, ತುಳಸಿ ಅರ್ಚನೆ, ವಿವಿಧ ಬಗೆಯ ಹೂವಿನ ಪೂಜೆ, ಕುಂಕುಮಾರ್ಚನೆ, ನೈವೇಧ್ಯ ಪೂಜೆ ಮಾಡಿದರು. ಸಂಜೆ ದೇವಿಯನ್ನು ಭಸ್ಮದಿಂದ ಅಲಂಕರಿಸಲಾಯಿತು. ನಂತರ ಭಕ್ತರಿಂದ ವಿಶೇಷ ಪೂಜೆ, ಆರಾಧನೆಗಳು ನಡೆದವು. ರಾತ್ರಿ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.