ವೀರಾಜಪೇಟೆ ವರದಿ, ಅ.21: ಕೊಡವ ಬುಡಕಟ್ಟು ಕುಲವನ್ನು ಎಸ್.ಟಿ ಪಟ್ಟಿಯಲ್ಲಿ ಸೇರಿಸಿ ರಾಜ್ಯಾಂಗ ಖಾತರಿ ಮತ್ತು ಕೊಡವರಿಗೆ ಭೂ ರಾಜಕೀಯ ಸ್ವಾಯತ್ತತೆ ಮತ್ತು ಸಂಸ್ಕøತಿಯ ರಕ್ಷಣೆ ಸಂವಿಧಾನಿಕ ಹಕ್ಕೊತ್ತಾಯವಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಆಗ್ರಹಿಸಿದ್ದರು.

ಕಾಕೋಟುಪರಂಬು ಮಂದಿನಲ್ಲಿ ನಡೆದ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದ ನಾಚಪ್ಪ ಕೊಡವ ಬುಡಕಟ್ಟು ಕುಲವನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕೆಂದು ಹೇಳಿದ ರಲ್ಲದೆ ಈ ಕುರಿತ ನಿರ್ಣಯವನ್ನು ಗುರುಕಾರೋಣ, ಸೂರ್ಯ-ಚಂದ್ರ ಭೂಮಿ ತಾಯಿ, ಜಲದೇವಿ ಕಾವೇರಿ ಯನ್ನು ಸಾಕ್ಷಿಕರಿಸಿ ಜನಸ್ತೋಮದ ಅಂಗೀಕಾರ ಪಡೆಯಲಾಯಿತು. ಕಾಕೋಟುಪರಂಬುವಿನ ನಾಲ್ಕು ಗ್ರಾಮದ ಕೊಡವರು ಹಾಜರಿದ್ದರು.