ಗೋಣಿಕೊಪ್ಪ ವರದಿ, ಅ. 21: ಇಲ್ಲಿನ ವಿಜಯ ಬ್ಯಾಂಕ್ ಸಮೀಪವಿರುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರದಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಜಾಗೃತಿ ಅಭಿಯಾನ ನಡೆಸಲಾಯಿತು.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ದೇಶನದಂತೆ ಸೂಕ್ತವರ್ತನಾ ಕ್ರಮಗಳ ಮಾರ್ಗಸೂಚಿಯಂತೆ ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಂಡು, ಕೈಯಲ್ಲಿ ನೈರ್ಮಲ್ಯ ಕಾಪಾಡುವ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರಿಗೆ ಕರಪತ್ರ ವಿತರಣೆ ಮಾಡಲಾಯಿತು.
ಪ್ರಧಾನಮಂತ್ರಿ ಭಾರತೀಯ ಜನೌÀಔಷಧಿ ಕೇಂದ್ರದ ಮಾಲಿಕ ಕಟ್ಟೇಂಗಡ ಸುನಿಲ್ ಚೆಂಗಪ್ಪ, ಸ್ಥಳೀಯರಾದ ಬಿ.ಎನ್. ಗಣಪತಿ, ಗಾಣಂಗಡ ರಶಿಕ ತಮ್ಮಯ್ಯ, ಮನೋಜ್, ಪಲ್ಲವಿ ಚೆಂಗಪ್ಪ, ಭವ್ಯ ಪಾಲ್ಗೊಂಡಿದ್ದರು.