ಮಡಿಕೇರಿ, ಅ. 21: ನಾಡಹಬ್ಬ ಮಡಿಕೇರಿ ದಸರಾದ ನಾಲ್ಕು ಶಕ್ತಿ ದೇವತೆಗಳ ಕರಗಗಳ ನಗರ ಸಂಚಾರಕ್ಕೆ ನಿರ್ಬಂಧ ಹೇರಿರುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್, ನವರಾತ್ರಿಯ ಕೊನೆಯ ಮೂರು ದಿನಗಳಾದರು ಕರಗ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತ ಮಡಿಕೇರಿ ದಸರಾ ಆಚರಣೆ ಕುರಿತು ತನ್ನ ನಿರ್ಧಾರವನ್ನು ಬದಲಿಸಿ ತಾ. 23, 24 ಮತ್ತು 25 ರಂದು ಕರಗಗಳ ನಗರ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಆ ಮೂಲಕ ಕರಗ ಪೂಜೆಗಾಗಿ ದೇವಾಲಯಗಳಲ್ಲಿ ನೂಕುನುಗ್ಗಲು ಉಂಟಾಗುವುದನ್ನು ತಪ್ಪಿಸಬೇಕು ಎಂದು ಉಮೇಶ್ ಒತ್ತಾಯಿಸಿದ್ದಾರೆ.