ಗೋಣಿಕೊಪ್ಪಲು, ಅ. 21: ಗ್ರಾ.ಪಂ. ಗ್ರಾಮ ಸಭೆಯಲ್ಲಿ ಭಾಗವಹಿ ಸಬೇಕಾದ ವಿವಿಧ ಇಲಾಖೆಯ ಅಧಿಕಾರಿಗಳು ಗೈರು ಹಾಜರಿಯಾದ ಹಿನ್ನೆಲೆ ಗ್ರಾಮ ಸಭೆಯನ್ನು ಮುಂದೂಡಲಾಯಿತು. ಹಾತೂರು ಗ್ರಾ.ಪಂ. ಯ 20-21ನೇ ಸಾಲಿನ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಗುರುಶಾಂತಪ್ಪ ಅಧ್ಯಕ್ಷತೆಯಲ್ಲಿ ನೋಡಲ್ ಅಧಿಕಾರಿ ಕೆ.ಆರ್. ರಾಜೇಶ್ ಸಮ್ಮುಖದಲ್ಲಿ ಏರ್ಪಡಿಸಲಾಗಿತ್ತು.
ಸಭೆಗೆ ಅವಶ್ಯವಾಗಿ ಹಾಜರಾಗಬೇಕಾಗಿದ್ದ ಚೆಸ್ಕಾಂ, ಕಂದಾಯ, ಕೃಷಿ ಅಧಿಕಾರಿಗಳು ಭಾಗವಹಿಸದ ಹಿನ್ನೆಲೆ ಅಧಿಕಾರಿಗಳು ಆಗಮಿಸುವವರೆಗೂ ಸಭೆ ನಡೆಸಲು ಅವಕಾಶ ನೀಡುವುದಿಲ್ಲವೆಂದು ಗ್ರಾಮಸ್ಥರು ಒತ್ತಾಯಿಸಿದರು. ಇದರಿಂದ ಆಡಳಿತ ಅಧಿಕಾರಿಗಳು ಗ್ರಾಮ ಸಭೆಯನ್ನು ಮುಂದಿನ ದಿನಾಂಕಕ್ಕೆ ಮುಂದೂಡಿದರು.