ಸೋಮವಾರಪೇಟೆ, ಅ.21: ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದ ಶ್ರೀ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶಕ್ತಿ ಪಾರ್ವತಿಗೆ ಸರಸ್ವತಿ ಅಲಂಕಾರ, ಸರಸ್ವತಿ ಪೂಜೆ ಹಾಗೂ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.

ಪ್ರಧಾನ ಅರ್ಚಕರಾದ ಚಿತ್ರಕುಮಾರ್ ಭಟ್ ನೇತೃತ್ವದಲ್ಲಿ ಸುಮಾರು 14 ಮಕ್ಕಳು ಪೆÇೀಷಕರೊಂದಿಗೆ ಅಕ್ಷರಾಭ್ಯಾಸ ಮಾಡಿದರು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎಸ್. ಆರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ. ವಿಜೇತ್, ಪದಾಧಿಕಾರಿಗಳಾದ ರಾಜೇಶ್ ಪದ್ಮನಾಭ, ದೇವಿಬಳಗದ ಅಧ್ಯಕ್ಷೆ ಪ್ರೇಮಾ ದಿನೇಶ್, ಲಕ್ಷ್ಮೀ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.