ಮಡಿಕೇರಿ, ಅ. 21: ಮರಂದೋಡ ಗ್ರಾಮದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಕೃಷಿ ಫಸಲನ್ನು ತುಳಿದು, ತಿಂದು ನಾಶ ಮಾಡುತ್ತಿರುವದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಚೋಯಮಾಡಂಡ ಕರುಂಬಯ್ಯ, ಅಚ್ಚಪ್ಪ, ಮೊಣ್ಣಪ್ಪ, ಪೂವಯ್ಯ ಅವರಿಗೆ ಸೇರಿದ ಕೃಷಿ ಭೂಮಿಯಲ್ಲಿ ಕಾಡಾನೆಗಳು ಧಾಳಿ ಮಾಡಿ ನಷ್ಟ ಉಂಟು ಮಾಡಿವೆ. ಅಲ್ಲದೆ ಚಂಡಿರ, ಅನ್ನಡಿಯಂಡ ಕುಟುಂಬಸ್ಥರ ಕೃಷಿ ಫಸಲನ್ನು ಕೂಡ ನಾಶ ಮಾಡಿರುವದಾಗಿ ತಿಳಿಸಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.