ಗೋಣಿಕೊಪ್ಪ ವರದಿ, ಅ. 21: ಟಿ. ಶೆಟ್ಟಿಗೇರಿ ಕೊಡವ ಸಮಾಜ ಅಧ್ಯಕ್ಷರಾಗಿ ಹಾಗೂ ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿಧನರಾದ ಕೋಟ್ರಮಾಡ ಅರುಣ್ ಅಪ್ಪಣ್ಣ ಅವರ ಆತ್ಮಕ್ಕೆ ಶಾಂತಿ ಕೋರಿ ಟಿ. ಶೆಟ್ಟಿಗೇರಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ವಿವಿಧ ರಾಜಕೀಯ ಪಕ್ಷ, ವಿವಿಧ ಸಂಘ-ಸಂಸ್ಥೆ ಹಾಗೂ ಟಿ. ಶೆಟ್ಟಿಗೇರಿ ವರ್ತಕರು ಸೇರಿ ಟಿ. ಶೆಟ್ಟಿಗೇರಿ ಮುಖ್ಯ ವೃತ್ತದಲ್ಲಿ ಅರುಣ್ ಅಪ್ಪಣ್ಣ ಅವರ ಭಾವಚಿತ್ರ ಇಟ್ಟು ಪುಷ್ಪನಮನ ಸಲ್ಲಿಸಲಾಯಿತು. ಪ್ರಮುಖರಾದ ಕುಂಞಂಗಡ ಅರುಣ್ ಭೀಮಯ್ಯ, ಅಪ್ಪಚಂಗಡ ಮೋಟಯ್ಯ, ತೀತಿರ ಧರ್ಮಜ, ಅಜ್ಜಮಾಡ ಕಟ್ಟಿ ಮಂದಯ್ಯ, ಮಂದಮಾಡ ತೇಜಪ್ಪ ಅವರುಗಳು ಅರುಣ್ ಅಪ್ಪಣ್ಣ ಅವರ ಸಾಮಾಜಿಕ ಕಳಕಳಿ, ಸಂಸ್ಕøತಿ, ಕಲೆಗೆ ನೀಡುತ್ತಿದ್ದ ಕಾಳಜಿ ಬಗ್ಗೆ ನೆನಪು ಮಾಡಿಕೊಂಡರು.
ಈ ಸಂದರ್ಭ ಪ್ರಮುಖರಾದ ಮಚ್ಚಮಾಡ ಸುಮಂತ್, ಮಚ್ಚಮಾಡ ಮುರುಳಿ, ಕುಂಞ್ಞಂಗಡ ಕೃಷ್ಣ, ಚೆಟ್ಟಂಗಡ ರಂಜು ಕರುಂಬಯ್ಯ, ಮಾಣೀರ ಉಮೇಶ್, ನಾಗವಂಡ ಕೃಪ, ಕಟ್ಟೇರ ಈಶ್ವರ ತಿಮ್ಮಯ್ಯ, ಬೊಳ್ಳಜೀರ ಸುಶೀಲಾ ಅಶೋಕ್, ಕೊಟ್ರಮಾಡ ನಿತಿನ್, ಕೊಟ್ರಮಾಡ ರೋಷನ್, ತಡಿಯಂಗಡ ಶಮ್ಮಿ, ತಡಿಯಂಗಡ ಕಂಬ, ಮಂದಮಾಡ ತೇಜಪ್ಪ, ಚೆಟ್ಟಂಗಡ ಕಂಬ, ಚೆಟ್ಟಂಗಡ ಮಹೇಶ್ ಮಂದಣ್ಣ, ಮಚ್ಚಮಾಡ ಶ್ಯಾಮ್, ಚೊಟ್ಟೆಯಂಡಮಾಡ ವಿಶು, ಚೊಟ್ಟೆಯಂಡಮಾಡ ಉದಯ, ಚೊಟ್ಟೆಯಂಡಮಾಡ ವಿಶ್ವನಾಥ್, ಕಟ್ಟೇರ ಬೋಪಣ್ಣ, ಕರ್ನಂಡ ಚಲನ್, ಕಾಳಿಮಾಡ ತಿಮ್ಮಯ್ಯ, ಮಚ್ಚಮಾಡ ಸುಬ್ರಮಣಿ, ಮಚ್ಚಮಾಡ ಮಾಚಯ್ಯ, ಮಾಯಣಮಾಡ ರಾಜ, ಮಾಯಣಮಾಡ ದೊರೆ ಇದ್ದರು.