ಮಡಿಕೇರಿ, ಅ. 19: ಕೂರ್ಗ್ ಸನ್‍ರೈಸ್ ಮೆಲೊಡೀಸ್ ವಾದ್ಯಗೋಷ್ಠಿ ತಂಡದಿಂದ ತಾ. 24 ರಂದು ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಪದ್ಮಭೂಷಣ ಎಸ್.ಪಿ. ಬಾಲಸುಬ್ರಮಣ್ಯಂ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಹಾಡಲಿಚ್ಛಿಸುವವರು ಎಸ್.ಪಿ.ಬಿ. ಅವರ ಯಾವುದಾದರೂ 2 ಹಾಡುಗಳನ್ನು ಕರೋಕಿಯಲ್ಲಿ ಹಾಡಿ ರೆಕಾರ್ಡ್ ಮಾಡಿ ಎರಡು ದಿನಗಳೊಳಗೆ 9448504545 ಈ ಮೊಬೈಲ್ ನಂಬರಿಗೆ ಕಳುಹಿಸಿಕೊಡಬಹುದಾಗಿದೆ. ತೀರ್ಪುಗಾರರ ಆಯ್ಕೆಯ ಮೇರೆಗೆ ಫಲಿತಾಂಶವನ್ನು ತಿಳಿಸಲಾಗುವುದು ಎಂದು ಕೂರ್ಗ್ ಸನ್‍ರೈಸ್ ವೆಲ್‍ನೆಸ್ ಮೆಲೊಡೀಸ್‍ನ ಪಿ. ರವಿ ತಿಳಿಸಿದ್ದಾರೆ.