ಪೆರಾಜೆ, ಅ. 19: ಭಾರತೀಯ ಜನತಾ ಪಾರ್ಟಿ ಗ್ರಾಮ ಸಮಿತಿ ಪೆರಾಜೆ ಇದರ ಸಭೆಯು ಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ನಿಡ್ಯಮಲೆಯವರ ಅಧ್ಯಕ್ಷತೆಯಲ್ಲಿ ಪೆರಾಜೆ ಪಂಚಾಯಿತಿ ಸಭಾ ಭವನದಲ್ಲಿ ನಡೆಯಿತು. ಸಭೆಯ ಮಾಸಿಕ ವರದಿ ಮತ್ತು ಲೆಕ್ಕಪತ್ರವನ್ನು ಕಾರ್ಯದರ್ಶಿ ಧನಂಜಯ ಮಂಡಿಸಿದರು. ಗ್ರಾಮದ ಕೆಲವು ಮೂಲಭೂತ ಸೌಕರ್ಯಗಳು ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಭಾಗವಹಿಸಿದ್ದರು. ಈ ಸಂದರ್ಭ ಶಕ್ತಿ ಕೇಂದ್ರದ ಸಹ ಪ್ರಮುಖ್ ಚಿನ್ನಪ್ಪ ಆಡ್ಕ, ತಾಲೂಕು ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ, ಜಿಲ್ಲಾ ಬಿಜೆಪಿ ಸಲಹಾ ಸಮಿತಿಯ ಸದಸ್ಯ ಹೊನ್ನಪ್ಪ ಅಮೆಚೂರ್ ಸೇರಿದಂತೆ, ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಮಡಿಕೇರಿ ತಾಲೂಕು ಬಿಜೆಪಿ ಪದಾಧಿಕಾರಿ ಧನಂಜಯ ಕೋಡಿ ಸ್ವಾಗತಿಸಿ, ಮಡಿಕೇರಿ ತಾಲೂಕು ಯುವ ಮೋರ್ಚಾ ಪದಾಧಿಕಾರಿ ಪ್ರವೀಣ ಮಜಿಕೋಡಿ ವಂದಿಸಿದರು.