ಪೆÇನ್ನಂಪೇಟೆ, ಅ. 20: ಮುಗುಟಗೇರಿ ಟರ್ಮಿನೇಟರ್ ಕ್ರಿಕೆಟ್ ತಂಡದ ಸದಸ್ಯರು ದಾನಿಗಳ ಸಹಾಯದಿಂದ ಪೆÇನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ, ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಟರ್ಮಿನೇಟರ್ಸ್ ಕ್ರಿಕೆಟ್ ಕಪ್ -2020ರ ಫೈನಲ್ ಪಂದ್ಯದಲ್ಲಿ ಹುದಿಕೇರಿ ವಾರಿಯರ್ಸ್ ತಂಡ ಪಾಲಿಬೆಟ್ಟ ಫ್ರೆಂಡ್ಸ್ ತಂಡದ ವಿರುದ್ಧ 49 ರನ್‍ಗಳ ಭರ್ಜರಿ ಜಯ ಪೆÇನ್ನಂಪೇಟೆ, ಅ. 20: ಮುಗುಟಗೇರಿ ಟರ್ಮಿನೇಟರ್ ಕ್ರಿಕೆಟ್ ತಂಡದ ಸದಸ್ಯರು ದಾನಿಗಳ ಸಹಾಯದಿಂದ ಪೆÇನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ, ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಟರ್ಮಿನೇಟರ್ಸ್ ಕ್ರಿಕೆಟ್ ಕಪ್ -2020ರ ಫೈನಲ್ ಪಂದ್ಯದಲ್ಲಿ ಹುದಿಕೇರಿ ವಾರಿಯರ್ಸ್ ತಂಡ ಪಾಲಿಬೆಟ್ಟ ಫ್ರೆಂಡ್ಸ್ ತಂಡದ ವಿರುದ್ಧ 49 ರನ್‍ಗಳ ಭರ್ಜರಿ ಜಯ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಹುದಿಕೇರಿ ತಂಡದ ನಿಖಿಲ್ ಆಳ್ವಾ, ಬೆಸ್ಟ್ ಬ್ಯಾಟ್ಸ್‍ಮನ್ ಆಗಿ ಪಾಲಿಬೆಟ್ಟ ತಂಡದ ಹರೀಶ್, ಬೆಸ್ಟ್ ಬೌಲರ್ ಆಗಿ ಪಾಲಿಬೆಟ್ಟ ತಂಡದ ವರ್ಗೀಸ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹುದಿಕೇರಿ ತಂಡದ ಸಂಶು ಪಡೆದುಕೊಂಡರು.
ಹೆಚ್.ಎನ್. ಸುಬ್ಬಯ್ಯ, ಡ್ಯಾನಿ ದೇವಯ್ಯ, ಅಶೋಕ್ ಮುತ್ತಣ್ಣ, ಕೌಶಿಕ್ ಕಾವೇರಪ್ಪ, ಶರಣ್ ಅಯ್ಯಪ್ಪ, ರಿಚಿ ಕಾರ್ಯಪ್ಪ ಪಂದ್ಯಾವಳಿಯನ್ನು ಆಯೋಜಿಸಿದ್ದರು. ನರೇಶ್, ರಾಜ್, ಕವನ್, ಕಾರ್ತಿಕ್ ಹಾಗೂ ಮದನ್ ತೀರ್ಪುಗಾರರಾಗಿ, ಸ್ಕೋರರ್ ಆಗಿ ಕೋಳೆರ ದರ್ಶನ್ ತಿಮ್ಮಯ್ಯ ಕಾರ್ಯನಿರ್ವಹಿಸಿದರು.
ಪೆÇನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೀರಂಡ ಕಂದ ಸುಬ್ಬಯ್ಯ, ಆಲೆಮಾಡ ರೋಷನ್, ಮುದ್ದಿಯಡ ನರೇಶ್, ಕಡೆಮಾಡ ಸತೀಶ್, ಚೀರಂಡ ಪ್ರವೀಣ್ ಚಂಗಪ್ಪ, ಆಲೆಮಾಡ ನವೀನ್, ಕಳ್ಳಿಚಂಡ ನವೀನ್, ಚೀರಂಡ ಸುಬ್ಬಯ್ಯ, ನಾಚಪ್ಪ ಬಹುಮಾನ ವಿತರಿಸಿದರು. ಜಿಲ್ಲೆಯ ವಿವಿಧೆಡೆಯಿಂದ 24 ತಂಡಗಳು ಭಾಗವಹಿಸಿದ್ದವು.