ಆರ್‍ಎಸ್‍ಎಸ್ ವಿಜಯದಶಮಿಗೆ ಗಣ್ಯರಿಗಿಲ್ಲ ಆಹ್ವಾನ

ನಾಗ್ಪುರ, ಅ. 20: ಸದ್ಯ ಎಲ್ಲೆಲ್ಲೂ ವ್ಯಾಪಿಸಿರುವ ಕೊರೊನಾ ಸೋಂಕಿನ ಕಾರಣ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್) ತನ್ನ ವಾರ್ಷಿಕ ವಿಜಯದಶಮಿ ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸುವ ನಿರ್ಧಾರವನ್ನು ಕೈಬಿಟ್ಟಿದೆ. ಈ ವರ್ಷ ಹಬ್ಬದ ಸಂದರ್ಭ ಆರ್‍ಎಸ್‍ಎಸ್ ಸರಸಂಗ ಚಾಲಕ ಮೋಹನ್ ಭಾಗವತ್ ಮಾತ್ರವೇ ಭಾಗವಹಿಸಿ ಭಾಷಣ ಮಾಡಲಿದ್ದಾರೆ ಹೊರತು ಬೇರಾವ ಮುಖ್ಯ ಅತಿಥಿಗಳಿರುವುದಿಲ್ಲ ಎಂದು ಸಂಘ ತೀರ್ಮಾನಿಸಿದೆ. ಆರ್‍ಎಸ್‍ಎಸ್ ಮುಖ್ಯಸ್ಥರ ವಿಜಯದಶಮಿ ಬಾಷಣವನ್ನು ಸಂಸ್ಥೆ ಒಂದು ಪ್ರಮುಖ ಕಾರ್ಯಕ್ರಮವಾಗಿ ಪರಿಗಣಿಸಲಾಗಿದೆ ಏಕೆಂದರೆ ಅವರ ಭಾಷಣದ ಸಮಯದಲ್ಲಿ ಭವಿಷ್ಯದ ಯೋಜನೆಗಳು ಮತ್ತು ದೃಷ್ಟಿಕೋನವನ್ನು ಎಲ್ಲರಿಗೆ ತಿಳಿಸಲಾಗುತ್ತದೆ. ಈ ಹಂತದಿಂದಲೇ ರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ಅನೇಕ ವಿಷಯಗಳ ಬಗ್ಗೆ ಆರ್‍ಎಸ್‍ಎಸ್ ನಿಲುವು ತಾಳುತ್ತದೆ. ಆರ್‍ಎಸ್‍ಎಸ್‍ನ ಹಿರಿಯ ಮುಖಂಡರ ಪ್ರಕಾರ ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಬಿಳಿ ಅಂಗಿ ಮತ್ತು ಖಾಕಿ ಪ್ಯಾಂಟ್‍ಗಳನ್ನು ಧರಿಸಿದ ಸ್ವಯಂ ಸೇವಕರಿಂದ ತುಂಬಿರುವ ಮೈದಾನ ಈ ಬಾರಿ 50 ಕ್ಕಿಂತ ಹೆಚ್ಚಿನ ಜನರನ್ನು ಕಾಣುವುದಿಲ್ಲ. ಆರ್‍ಎಸ್‍ಎಸ್ ಮುಖ್ಯಸ್ಥರ ಭಾಷಣವನ್ನು ತಾ. 25 ರಂದು ಬೆಳಿಗ್ಗೆ 8 ಗಂಟೆಗೆ ನಿಗದಿಪಡಿಸಲಾಗಿದೆ.

ಕೃಷಿ ಮಸೂದೆ ವಿರುದ್ಧ ಪಂಜಾಬ್ ನಿರ್ಣಯ

ಚಂಡೀಗಢ, ಅ. 20: ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಜಾರಿಗೆ ತಂದಿರುವ ವಿವಾದಿತ ಕೃಷಿ ಮಸೂದೆ ವಿರುದ್ಧ ಪಂಜಾಬ್ ರಾಜ್ಯ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದಾರೆ. ನೂತನ ಕೃಷಿ ಮಸೂದೆಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಶೇಷ ಅಧಿವೇಶನದ ಎರಡನೇ ದಿನವಾದ ಇಂದು ಸದನದ ನಾಯಕ ನಿರ್ಣಯ ಮಂಡನೆ ಮಾಡಿದರು. ಕೇಂದ್ರದ ಕೃಷಿ ಕಾನೂನುಗಳನ್ನು ಎದುರಿಸಲು ಮೂರು ಮಸೂದೆಗಳನ್ನು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಪರಿಚಯಿಸಿದರು. ಅಮರೀಂದರ್ ಸಿಂಗ್ ಅವರು ಪರಿಚಯಿಸಿದ ಮೂರು ಮಸೂದೆಗಳು ಇಂತಿವೆ. ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ವಿಶೇಷ ನಿಬಂಧನೆಗಳು ಮತ್ತು ಪಂಜಾಬ್ ತಿದ್ದುಪಡಿ ಮಸೂದೆ 2020, ಅಗತ್ಯ ಸರಕುಗಳು (ವಿಶೇಷ ನಿಬಂಧನೆಗಳು ಮತ್ತು ಪಂಜಾಬ್ ತಿದ್ದುಪಡಿ) ಮಸೂದೆ 2020, ಮತ್ತು ಬೆಲೆ ಭರವಸೆ ಕುರಿತು ರೈತರ ಒಪ್ಪಂದ ಮತ್ತು ಕೃಷಿ ಸೇವೆಗಳು (ವಿಶೇಷ ನಿಬಂಧನೆಗಳು ಮತ್ತು ಪಂಜಾಬ್ ತಿದ್ದುಪಡಿ) ಮಸೂದೆ 2020. ಸದನವನ್ನುದ್ದೇಶಿಸಿ ಮಾತನಾಡಿರುವ ಸಿಂಗ್ ಅವರು, ಕೃಷಿ ರಾಜ್ಯದ ವಿಚಾರವಾಗಿದ್ದು, ಕೇಂದ್ರ ಸರಕಾರ ಇದನ್ನು ನಿರ್ಲಕ್ಷಿಸುತ್ತಿದೆ. ಭಾರತ ಸರಕಾರ ಮಾಡಲು ಹೊರಟಿರುವ ಕೆಲಸವು ನನಗೆ ವಿಚಿತ್ರವಾಗಿ ಕಾಣುತ್ತಿದೆ ಎಂದು ಹೇಳಿದ್ದಾರೆ.

ಪ್ರತಿಯೊಬ್ಬರಿಗೆ ನಿವೇಶನ : ಸಿಎಂ ಭರವಸೆ

ಶಿವಮೊಗ್ಗ ಅ. 20: ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ನಿವೇಶನ ಒದಗಿಸುವುದು ಹಾಗೂ ಹಂತ ಹಂತವಾಗಿ ಮನೆಗಳನ್ನು ನಿರ್ಮಿಸಿಕೊಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು. ಶಿಕಾರಿಪುರದಲ್ಲಿ ಆಯೋಜಿಸಲಾಗಿದ್ದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಮನೆ ಮನೆಗೆ ಹಕ್ಕುಪತ್ರ ತಲುಪಿಸಲಾಗುವುದು. ಮಧ್ಯವರ್ತಿಗಳಿಗೆ ಯಾರೂ ಹಣ ನೀಡಬಾರದು. ಯಾರಾದರೂ ದುಡ್ಡು ಕೇಳಿದರೆ ಜಿಲ್ಲಾಧಿಕಾರಿಗೆ ದೂರು ನೀಡುವಂತೆ ಅವರು ತಿಳಿಸಿದರು. ಈ ಬಾರಿ ಉತ್ತಮ ಮಳೆಯಾಗಿದ್ದು, ಕೃಷಿಯನ್ನು ಸುಸ್ತಿರಗೊಳಿಸುವುದು ಸರ್ಕಾರದ ಗುರಿಯಾಗಿದೆ. ತಾಲೂಕಿನಲ್ಲಿ ಮೆಕ್ಕೆ ಜೋಳ ಉತ್ತಮವಾಗಿ ಬಂದಿದ್ದು, ಕಾಳು ಬಿಡಿಸುವ ಯಂತ್ರವನ್ನು ರೈತರಿಗೆ ಸಬ್ಸಿಡಿ ದರದಲ್ಲಿ ಒದಗಿಸಲಾಗುತ್ತಿದೆ.ಇದಕ್ಕಾಗಿ ಶಿಕಾರಿಪುರ ತಾಲೂಕಿಗೆ ರೂ. 1.40 ಕೋಟಿ ನಿಗದಿಪಡಿಸಲಾಗಿದೆ ಎಂದರು.

ಬಾಂಬ್ ಬೆದರಿಕೆ ಹಾಕಿದವರ ಬಂಧನ

ಬೆಂಗಳೂರು, ಅ. 20: ರಾಗಿಣಿ ಮತ್ತು ಸಂಜನಾಗೆ ಬೇಲ್ ಕೊಡದಿದ್ದರೆ, ಬಾಂಬ್ ಹಾಕುತ್ತೇವೆ ಎಂದು ಪತ್ರ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ಕೇಸಿನಲ್ಲಿ ಅರೆಸ್ಟ್ ಆಗಿರುವ ನಟಿಯರಾದ ರಾಗಿಣಿ ಮತ್ತು ಸಂಜನ ಅವರಿಗೆ ಜಾಮೀನು ನೀಡದೆ ಇದ್ದರೆ, ಸಿಟಿ ಸಿವಿಲ್ ಕೋರ್ಟ್ ಮತ್ತು ಕಮೀಷನರ್ ಆಫೀಸಿಗೆ ಬಾಂಬ್ ಹಾಕುತ್ತೇವೆ ಎಂದು ನಿನ್ನೆ ಬೆದರಿಕೆ ಪತ್ರವನ್ನು ಬರೆಯಲಾಗಿತ್ತು. ಜೊತೆಗೆ ಸಿಟಿ ಸಿವಿಲ್ ಕೋರ್ಟ್ ಜಡ್ಜ್, ಕಮೀಷನರ್ ಕಮಲ್ ಪಂಥ್, ಜಂಟಿ ಪೆÇಲೀಸ್ ಆಯುಕ್ತ, ಸಂದೀಪ್ ಪಾಟೀಲ್ ಮತ್ತು ಡಿಸಿಪಿ ರವಿಕುಮಾರಿಗೆ ಪತ್ರ ಬರೆದಿದ್ದರು. ಈ ಬೆದರಿಕೆ ಪತ್ರವನ್ನು ದ್ವೇಷದ ಹಿನ್ನೆಲೆ ಬರೆಯಲಾಗಿದೆ ಎಂದು ಶಂಕಿಸಲಾಗಿದೆ. ಪತ್ರ ಕಳುಹಿಸಿರುವ ವ್ಯಕ್ತಿ ಪತ್ರದ ಜೊತೆಗೆ ವ್ಯಕ್ತಿಯೊಬ್ಬರ ವೋಟರ್ ಐಡಿ ಮತ್ತು ಎರಡು ಮೊಬೈಲ್ ನಂಬರ್ ಕಳುಹಿಸಿದ್ದ. ಪತ್ರದಲ್ಲಿರುವ ವೋಟರ್ ಐಡಿ ಕೊಡಿಯಳ್ಳಿ ಪಂಚಾಯಿತಿ, ಹರಿವೇಸಂದ್ರ ಗ್ರಾಮ ಶಿವಪ್ರಕಾಶ್ ಎಂಬ ಹೆಸರಿನಲ್ಲಿದೆ. ಈ ಬೆದರಿಕೆ ಪತ್ರಗಳು ಐದು ಗಂಟೆ ವೇಳೆ ಬಂದಿದ್ದವು.

ರಸ್ತೆ ಪಾಲಾದ ಕೇರಳದ ಬಿಯರ್

ಹಾಸನ, ಅ. 20: ಬಿಯರ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ರಸ್ತೆ ಬದಿ ಬಿಯರ್ ವ್ಯರ್ಥವಾಗಿ ಹರಿದು ಹೋದ ಘಟನೆ ಹಾಸನ ಜಿಲ್ಲೆಯ, ಹೊಳೆನರಸೀಪುರದಲ್ಲಿ ನಡೆದಿದೆ. ಹಾಸನದಿಂದ ಕೇರಳಕ್ಕೆ ಲಾರಿಯಲ್ಲಿ ಸುಮಾರು 900 ಬಾಕ್ಸ್ ಬಿಯರ್ ಸಾಗಿಸಲಾಗುತ್ತಿತ್ತು. ಆದರೆ ಹೊಳೆನರಸೀಪುರ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಿಯರ್ ತುಂಬಿದ ಲಾರಿ ರಸ್ತೆ ಬದಿಯಲ್ಲಿ ಒಂದು ಕಡೆ ವಾಲಿಕೊಂಡಿದೆ. ಇದರಿಂದ ಒಂದಷ್ಟು ಬಿಯರ್ ಬಾಟಲಿ ಲಾರಿಯೊಳಗೇ ಒಡೆದು ಹೋದರೆ, ಮತ್ತಷ್ಟು ಬಿಯರ್ ಬಾಟಲಿಗಳು ರಸ್ತೆ ಮೇಲೆ ಬಿದ್ದು ಚೂರಾಗಿವೆ. ಅಂದಾಜು ಸುಮಾರು ನೂರು ಬಾಕ್ಸ್‍ನಷ್ಟು ಬಿಯರ್ ನಾಶವಾಗಿದೆ. ಇದರಿಂದಾಗಿ ಬಿಯರ್ ರಸ್ತೆ ಬದಿ ನೀರಿನಂತೆ ಹರಿದು ಹೋಗಿದೆ. ವ್ಯರ್ಥವಾಗಿ ಹರಿದುಹೋಗುತ್ತಿದ್ದ ಬಿಯರ್ ಅನ್ನು ಸಾರ್ವಜನಿಕರು ಕುತೂಹಲದಿಂದ ನಿಂತು ನೋಡುತ್ತಿದ್ದರೆ, ಮದ್ಯಪ್ರಿಯರು ಅಯ್ಯೋ ಇಷ್ಟೊಂದು ಬಿಯರ್ ಕಣ್ಣ ಮುಂದೆಯೇ ವ್ಯರ್ಥ ಆಗುತ್ತಿದೆಯಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

ಉಗ್ರರ ದಾಳಿಗೆ ಇನ್ಸ್‍ಪೆಕ್ಟರ್ ಬಲಿ

ಶ್ರೀನಗರ, ಅ. 20: ಪೆÇಲೀಸ್ ಇನ್ಸ್‍ಪೆಕ್ಟರ್ ಓರ್ವರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್ಬೆಹರಾ ಪ್ರದೇಶದಲ್ಲಿ ನಡೆದಿದೆ. ಮೃತ ಇನ್ಸ್‍ಪೆಕ್ಟರ್‍ನ್ನು ಅನಂತನಾಗ್ ಜಿಲ್ಲೆಯ ಪೆÇಲೀಸ್ ಅಧಿಕಾರಿ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಅನಂತನಾಗ್ ಜಿಲ್ಲೆಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಮರಳುತ್ತಿದ್ದಾಗ ಮೊಹಮ್ಮದ್ ಅಶ್ರಫ್ ಅವರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಅಶ್ರಫ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಬಿಜ್ಬೆಹರಾ ಉಪ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ನಡೆದ ಪ್ರದೇಶವನ್ನು ಪೆÇಲೀಸರು ಸುತ್ತುವರಿದಿದ್ದಾರೆ. ಮೊಹಮ್ಮದ್ ಅಶ್ರಫ್ ಅವರು ಪ್ರಸ್ತುತ ಪುಲ್ವಾಮಾ ಜಿಲ್ಲೆಯ ಲೆಥ್ಪೊರಾದ ಪೆÇಲೀಸ್ ತರಬೇತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.