ಮಡಿಕೇರಿ, ಅ.20 : ಕತ್ತಲೆಕಾಡು ಸಮೀಪದ ಜೇನುಕೊಲ್ಲಿ ಬೆಟ್ಟ ಹಾಗೂ ಹೊಸ್ಕೇರಿ ಸುತ್ತ ಕಳೆದ 3 ದಿನಗಳಿಂದ ನಿರಂತರವಾಗಿ ಕಾಡಾನೆಗಳು ದಾಳಿ ನಡೆಸುತ್ತಿವೆ. ಜಿಲ್ಲೆಯ ಎಲ್ಲೆಡೆ ಕಾಡಾನೆಗಳದ್ದೇ ಸಮಸ್ಯೆಗಳಾಗಿವೆ. ಈ ವ್ಯಾಪ್ತಿಯಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುವುದು ವಿರಳವಾದು ದರಿಂದ ಇಲ್ಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ರಾತ್ರಿ ಬಂದ ಕಾಡಾನೆಗಳು ತೋಟದಲ್ಲಿದ್ದ ಬಾಳೆ, ಕಾಫಿ, ತೆಂಗು, ಅಡಿಕೆ ಗಿಡಗಳನ್ನೆಲ್ಲ ನಾಶಪಡಿಸಿವೆ. ರಾತ್ರಿ ಆನೆಗಳು ರಸ್ತೆಯಲ್ಲೇ ಸಾಗಿ ಬರುತ್ತಿರುವುದರಿಂದ ವಾಹನಗಳಲ್ಲಿ ಓಡಾಡಲು ಜನ ಹೆದರುವಂತಾಗಿದೆ.

ಇಲ್ಲಿರುವ ಮನೆಗಳ ನಡುವೆ ಅಂತರ ಹೆಚ್ಚಿರುವುದರಿಂದ ರಾತ್ರಿಯ ಹೊತ್ತು ಏನೇ ಆದರೂ ಸಹಾಯಕ್ಕೆ ಅಸಾಧ್ಯವಾಗಿದೆ. ಕಾಡಾನೆಗಳ ಸಮಸ್ಯೆಗೆ ಸರಿಯಾಗಿ ಆಹಾರ ಒದಗಿಸುವಂತ ಯೋಜನೆ ಕೈಗೊಂಡು ಈ ಸಮಸ್ಯೆಗೆ ಇತ್ಯರ್ಥ ಹಾಕದಿದ್ದಲ್ಲಿ ಇಡೀ ಜಿಲ್ಲೆ ಕಾಡಾನೆಗಳ ಬೀಡಾಗುವುದರಲ್ಲಿ ಸಂಶ ಯವಿಲ್ಲ. ಆದುದರಿಂದ ಸಂಬಂಧಿಸಿದ ಅರಣ್ಯಾಧಿಕಾರಿಗಳು ಗಮನಹರಿಸ ಬೇಕೆಂದು ಒತ್ತಾಯಿಸಿದ್ದಾರೆ.