ಕುಶಾಲನಗರ, ಅ. 20: ಅಖಿಲ ಭಾರತ ಸನ್ಯಾಸಿ ಸಂಘದ 10ನೇ ವರ್ಷದ ಕಾವೇರಿ ನದಿ ಜಾಗೃತಿ ತೀರ್ಥಯಾತ್ರೆಯ ರಥ ಜಿಲ್ಲೆ ಪ್ರವೇಶಿಸಿದೆ.
ತಮಿಳುನಾಡು ಮತ್ತು ರಾಜ್ಯದ ಸಾಧುಸಂತರು ಮಂಗಳವಾರ ಆಗಮಿಸಿದ ಸಂದರ್ಭ ಕುಶಾಲನಗರ ದಲ್ಲಿ ಅವರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ತಲಕಾವೇರಿಯಿಂದ ಪವಿತ್ರ ತೀರ್ಥ ಸಂಗ್ರಹಿಸಿ ಭಾಗಮಂಡಲ ಸಂಗಮದಲ್ಲಿ ಬೆಳಗ್ಗೆ 9 ಗಂಟೆಗೆ ನದಿಗೆ ಮಹಾ ಆರತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ನಂತರ ಮಡಿಕೇರಿ ಮಾರ್ಗವಾಗಿ ಕುಶಾಲನಗರಕ್ಕೆ ಬರುವ ಯಾತ್ರಾ ತಂಡ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಸಂಜೆ 4 ಗಂಟೆಗೆ ನಮಾಮಿ ಕಾವೇರಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ನದಿಗೆ ಮಹಾ ಆರತಿ ಬೆಳಗುವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಯಾತ್ರಾ ತಂಡ ಶ್ರೀರಂಗಪಟ್ಟಣದತ್ತ ಪ್ರಯಾಣ ಬೆಳೆಸಲಿದೆ.