ಕಣಿವೆ, ಅ. 20: ಈರುಳ್ಳಿಯ ದರ ದಿಢೀರನೇ 100 ರೂ.ಗೆ ಏರಿಕೆಯಾಗಿದೆ. ಕುಶಾಲನಗರದ ವಾರದ ಸಂತೆಯ ದಿನವಾದ ಮಂಗಳವಾರ ಈರುಳ್ಳಿ ಮಾರಾಟ ಮಾಡುವ ವರ್ತಕರು ಬೆಳಗ್ಗೆಯಿಂದ ಕೆಜಿ ಈರುಳ್ಳಿಗೆ ತಲಾ ಒಂದು ನೂರು ರೂ.ಗೆ ಮಾರಾಟ ಮಾಡಿದರು. ದೊಡ್ಡ ಗಾತ್ರದ ಈರುಳ್ಳಿಗೆ 100 ರೂ, ಸಣ್ಣ ಈರುಳ್ಳಿಗೆ 80 ರೂ.ಗೆ ಮಾರಾಟ ಮಾಡುತ್ತಿದ್ದುದರಿಂದ ಸಹಜವಾಗಿಯೇ ಗ್ರಾಹಕರ ಜೇಬಿಗೆ ಕತ್ತರಿ ಬಿತ್ತು.