ವೀರಾಜಪೇಟೆ, ಅ. 20: ವೀರಾಜಪೇಟೆ ತಾಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾಗಿ ಪಿ.ಜಿ. ಜನಾರ್ಧನ್ ಆಯ್ಕೆಗೊಂಡಿದ್ದಾರೆ.
ವೀರಾಜಪೇಟೆ ಪುರಭವನದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಸಹಾಯಕರ ತಾಲೂಕು ಸಮಿತಿಯ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘದ ಉಪಾಧ್ಯಕ್ಷರಾಗಿ ಲಕ್ಷ್ಮಣ್, ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ, ಖಜಾಂಚಿಯಾಗಿ ಬಿ. ದಿನೇಶ್. ಆಯ್ಕೆಗೊಂಡರು. ಸಭೆಯಲ್ಲಿ ತಾಲೂಕಿನ ಪ್ರತಿ ಹೋಬಳಿಯಿಂದ ಇಬ್ಬರು ಸದಸ್ಯರನ್ನು ಸಮಿತಿಗೆ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ವೀರಾಜಪೇಟೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯ ಗ್ರಾಮ ಸಹಾಯಕರು ಹಾಜರಿದ್ದರು.