ಮಡಿಕೇರಿ, ಅ. 20: ಬೇಟೋಳಿ ಗ್ರಾ.ಪಂ.ನ 2020-21ನೇ ಸಾಲಿನ ಬೇಟೋಳಿ ವಾರ್ಡ್ 2ರ ವಾರ್ಡ್ ಸಭೆ ತಾ. 21 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಚಿಟ್ಟಡೆ ದವಸ ಭಂಡಾರ ಕಟ್ಟಡದಲ್ಲಿ ನಡೆಯಲಿದೆ.

ಬೇಟೋಳಿ ವಾರ್ಡ್ 1ರ ವಾರ್ಡ್ ಸಭೆ ತಾ. 21 ರಂದು (ಇಂದು) 11.30ಕ್ಕೆ ಬೇಟೋಳಿ ರಾಮನಗರ ಪುದುಪಾಡಿ ಅಯ್ಯಪ್ಪ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಹೆಗ್ಗಳ ಬೂದಿಮಾಳ ವಾರ್ಡ್ 2ರ ವಾರ್ಡ್ ಸಭೆ ತಾ. 21 ರಂದು (ಇಂದು) ಮಧ್ಯಾಹ್ನ 2.30ಕ್ಕೆ ಹೆಗ್ಗಳ ಬೂದಿಮಾಳ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ. ಹೆಗ್ಗಳ ನಿರ್ಮಲಗಿರಿ ವಾರ್ಡ್ 1ರ ವಾರ್ಡ್ ಸಭೆ ತಾ. 21 ರಂದು (ಇಂದು) ಮಧ್ಯಾಹ್ನ 3.45ಕ್ಕೆ ನಿರ್ಮಲಗಿರಿ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ. ತಾ. 22 ರಂದು ಹೆಗ್ಗಳ ಮಾಕುಟ್ಟ ವಾರ್ಡ್ 3ರ ವಾರ್ಡ್ ಸಭೆ ಬೆಳಿಗ್ಗೆ 10.30ಕ್ಕೆ ಹೆಗ್ಗಳ ಬೂದಿಮಾಳ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ.