ಮಡಿಕೇರಿ, ಅ. 20: ಹೊಸೂರು ಗ್ರಾಮ ಪಂಚಾಯಿತಿಯಲ್ಲಿ ‘ಸ್ವಮಿತ್ವ’ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ತಾ. 19 ರಂದು ನಡೆದ ಗ್ರಾಮ ಸಭೆಯಲ್ಲಿ ‘ಸ್ವಮಿತ್ವ’ ಯೋಜನೆಯ ಮಾರ್ಗಸೂಚಿಗಳನ್ನು ಹಾಗೂ ಜನಸಾಮಾನ್ಯರಿಗೆ ಇದರಿಂದಾಗುವ ಅನುಕೂಲಗಳ ಬಗ್ಗೆ ಸರ್ವೆ ಇಲಾಖೆ ಅಧಿಕಾರಿ ಅರುಣ್ ಅವರು ಮಾಹಿತಿ ನೀಡಿದರು. ಸುದೀರ್ಘ ಚರ್ಚೆ ನಡೆಸಿದ ಸಭೆಯು ಈ ಯೋಜನೆಯ ಅನುಷ್ಠಾನ ಮಾಡುವಾಗ 10 ಮನೆಗಳಿಗಿಂತ ಹೆಚ್ಚಿರುವ ಗುಂಪು ಮನೆಗಳಿಗೆ ಮಾತ್ರ ಸೀಮಿತ ಮಾಡುವ ಬಗ್ಗೆ ಆಕ್ಷೇಪವೆತ್ತಿದ ಶ್ರೀನಿವಾಸಮೂರ್ತಿ ಎಲ್ಲಾ ಮನೆಗಳಿಗೂ ಪ್ರಾಪರ್ಟಿ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಪಿ.ಡಿ.ಒ. ಶ್ರೀನಿವಾಸ್ ಎಂ.ಡಿ. ಮಾತನಾಡಿ, ಈ ಯೋಜನೆಯನ್ನು ಆಧುನಿಕ ಢ್ರೋನ್ ತಂತ್ರಜ್ಞಾನ ಬಳಸಿ ಪ್ರಾಯೋಗಿಕವಾಗಿ ಜಾರಿ ಮಾಡುತ್ತಿರುವುದರಿಂದ ಸಾದಕ ಬಾದಕಗಳನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಎಲ್ಲಾ ಮನೆಗಳಿಗೂ ಅನುಷ್ಠಾನ ಮಾಡುವ ಸಂಬಂಧ ಸರ್ಕಾರವು ಆದೇಶ ಹೊರಡಿಸುವ ನಿರೀಕ್ಷೆ ಇದ್ದು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು. ಅಧ್ಯಕ್ಷ ಕೆ.ಎಂ. ಗೋಪಿ ಚಿಣ್ಣಪ್ಪ ಮಾತನಾಡಿ, ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಸಾರ್ವಜನಿಕರಿಗೆ ಸುಲಭವಾಗಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಿತರಿಸುವ ಯೋಜನೆಯಾಗಿದ್ದು ಸಾರ್ವಜನಿಕರು ಸಹಕಾರ ನೀಡುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಹಾಗೆಯೆ ಕಂದಾಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಬಂದಿರುವ ಮಾರ್ಗಸೂಚಿಗಳನ್ನು ಪಿ.ಡಿ.ಒ. ಓದಿ ಮಾಹಿತಿ ನೀಡಿದಾಗ ಕೋವಿಡ್-19 ಮಾರಕ ಕಾಯಿಲೆಯಿಂದಾಗಿ ಜನರು ಸಂಕµ್ಟÀದಲ್ಲಿರುವುದರಿಂದ ಈ ವರ್ಷ ಪರಿಷ್ಕರಣೆ ಬೇಡವೆಂದು ಮಾಜಿ ಅಧ್ಯಕ್ಷರು ಮನವಿ ಮಾಡಿದರು. ಅದಕ್ಕೆ ಸಾರ್ವಜನಿಕರು ಸರ್ವಾನುಮತದ ಬೆಂಬಲ ಸೂಚಿಸಿದರು.