ಕಡಂಗ, ಅ. 20: ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ನ 2020-21ನೇ ಸಾಲಿಗೆ ನೂತನ ಆಡಳಿತ ಮಂಡಳಿ ನೇಮಕ ಹಾಗೂ ಕಳೆದ ಸಾಲಿನಲ್ಲಿ ಸಮರ್ಥವಾಗಿ ಆಡಳಿತ ಅವಧಿ ಪೂರೈಸಿದ ಮಾಜಿ ಸಮಿತಿಗೆ ಸರಳವಾಗಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು.
ನೂತನ ಜಮಾಅತ್ ಅಧ್ಯಕ್ಷರಾಗಿ ಶೌಕತ್ ಮಕ್ಕಿ, ಉಪಾಧ್ಯಕ್ಷರಾಗಿ ಇಬು, ಕಾರ್ಯದರ್ಶಿಗಳಾಗಿ ಶಹೀದ್ ಪಾಯಡತ್ ಮತ್ತು ದರ್ಸ್ ಅಧ್ಯಕ್ಷರಾಗಿ ಅಬೂಬಕರ್ ಕುಂಡಂಡ ಹಾಗೂ ಕಾರ್ಯದರ್ಶಿಗಳಾಗಿ ಶಮೀರ್ ಮಕ್ಕಿ ರಿಲೀಫ್ ಸಮಿತಿ ಅಧ್ಯಕ್ಷರಾಗಿ ಬಶೀರ್ ಪೆÇಯಕ್ಕರ ಮತ್ತು ಕಾರ್ಯದರ್ಶಿಗಳಾಗಿ ಹಾರಿಸ್ ಝೈನಿ ಹಾಗೂ ಇನ್ನಿತರ ಸಮಿತಿ ಸದಸ್ಯರುಗಳು ನೂತನವಾಗಿ ಅಧಿಕಾರ ವಹಿಸಿಕೊಂಡರು.
ಇದರೊಂದಿಗೆ ಜಮಾಅತ್ ಅಧಿಕಾರಾವಧಿ ಪೂರ್ಣಗೊಳಿಸಿದ ಮಾಜಿ ಅಧ್ಯಕ್ಷ ಮಹಮ್ಮದ್ ಹಾಜಿ, ಕಾರ್ಯದರ್ಶಿಗಳಾದ ಅಬ್ದುಲ್ ರಹ್ಮಾನ್ ಕಾರಂಗೋಡ್ ಹಾಗೂ ರಿಲೀಫ್ ಅಧ್ಯಕ್ಷರುಗಳಾದ ರಝು ಅವರನ್ನು ನೂತನ ಪದಾಧಿಕಾರಿಗಳು ಬೀಳ್ಕೊಟ್ಟರು.
- ನೌಫಲ್, ಕಡಂಗ