ಸೋಮವಾರಪೇಟೆ, ಅ. 20: ಇಲ್ಲಿನ ಸೋಮವಾರಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಾಲ್ಕು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಮೇಲುಗೈ ಸಾಧಿಸಿದ್ದಾರೆ.
ಮಹಿಳಾ ಸಮಾಜದಲ್ಲಿ ನಡೆದ ಚುನಾವಣೆಯಲ್ಲಿ 4 ಸ್ಥಾನಗಳಿಗೆ ಒಟ್ಟು 8 ಮಂದಿ ಕಣದಲ್ಲಿದ್ದು, ಮಹೇಶ್ ತಿಮ್ಮಯ್ಯ, ಎಸ್.ಪಿ. ಪೊನ್ನಪ್ಪ, ಟಿ.ಕೆ. ರಮೇಶ್, ಎಸ್.ಎ. ಪ್ರತಾಪ್ ಅವರುಗಳು ಬಹುಮತದಿಂದ ಆಯ್ಕೆಯಾದರು.
ಕಾಂಗ್ರೆಸ್ ಸಿಂಡಿಕೇಟ್‍ನ ಅಶೋಕ್, ಗಣೇಶ್, ರಾಜು, ಮೋಹನ್ ಅವರುಗಳು ಚುನಾವಣೆ ಯಲ್ಲಿ ಪರಾಜಯಗೊಂಡರು. ಈಗಾಗಲೇ ಸಹಕಾರ ಸಂಘಕ್ಕೆ ಎಂ.ಸಿ. ರಾಘವ, ರಾಮಪ್ರಸಾದ್, ಉಮೇಶ್‍ರಾಜೇ ಅರಸ್, ಬಿ.ಎಸ್. ಸುಶೀಲಾ, ಯು.ಎಂ.ಬಸವರಾಜು, ಜಿ.ಬಿ. ಸೋಮಯ್ಯ, ಶ್ಯಾಮಲ, ಎಚ್.ವಿ. ಸುಜಾತ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಚುನಾವಣಾಧಿಕಾರಿಗಳಾಗಿ ಎಂ.ಎ. ಮೋಹನ್ ಕಾರ್ಯನಿರ್ವಹಿಸಿದರು.