ಮುಳ್ಳೂರು, ಅ. 20: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ ಕೃಷ್ಣಪ್ಪ ಸ್ಥಾಪಿತ) ಶನಿವಾರಸಂತೆ ಹೋಬಳಿ ಘಟಕದ ವತಿಯಿಂದ ತಾ. 24 ರಂದು ಬೆಳಗ್ಗೆ 10-30 ಗಂಟೆಗೆ ಸ್ಥಳೀಯ ಬಸಪ್ಪ ಕಲ್ಯಾಣ ಮಂಟ¥ Àದಲ್ಲಿ ತಾಲೂಕು ಮಟ್ಟದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಎಂದು ದಸಂಸ ಹೋಬಳಿ ಘಟಕದ ಅಧ್ಯಕ್ಷ ಸಿ.ಸಿ. ಲೋಕೇಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸಿ ಪ್ರೋತ್ಸಾಹಿಸುವ ಸಲುವಾಗಿ ನಮ್ಮ ಸಂಘಟನೆಯಿಂದ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಯಕ್ರಮ ವನ್ನು ಕುಶಾಲನಗರ ಡಿವೈಎಸ್‍ಪಿ ಎಚ್.ಎಂ.ಶೈಲೇಂದ್ರ ಉದ್ಘಾಟಿಸಲಿ ದ್ದಾರೆ. ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಡಿ.ಜೆ.ಈರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಂಡ್ಯದ ಪ್ರಭುಸ್ವಾಮಿ ಅಂಬೇಡ್ಕರ್ ಕುರಿತು ವಿಚಾರ ಮಂಡಿಸಲಿದ್ದು ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆ ಶಿಕ್ಷಕ ಕೆ.ಪಿ.ಜಯಕುಮಾರ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಎಚ್.ಇ. ದೇವರಾಜ್ ಪ್ರಮುಖರಾದ ದಸಂಸ ಸಂಘಟನಾ ಪ್ರಮುಖರಾದ ಜಯಪ್ಪ ಹಾನಗಲ್, ಎಚ್.ಎಲ್. ದಿವಾಕರ್ ಹಾಗೂ ದಸಂಸ ವಿವಿಧ ಸಂಘಟನಾ ಘಟಕದ ಪ್ರಮುಖರು ಭಾಗವಹಿಸಲಿ ದ್ದಾರೆ ಎಂದರು. ಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಡಿ.ಜೆ. ಈರಪ್ಪ ಸಂಘಟನಾ ಪ್ರಮುಖರಾದ ಎಂ.ಎಸ್. ಕುಮಾರ್, ಡಿ.ಸಿ. ಚಿಣ್ಣಪ್ಪ, ವೀರಭದ್ರ, ಕಳಲೆ ಗಣೇಶ್ ಹಾಜರಿದ್ದರು.