ಸಂಪಾಜೆ, ಅ. 19: ಭಾರತೀಯ ಜನತಾ ಪಕ್ಷ ಶಕ್ತಿ ಕೇಂದ್ರ ಸಂಪಾಜೆ ಕೊಡಗು, ಮಹಿಳಾ ಮೋರ್ಚಾ ಸಂಪಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಜಾಗೃತಿ ಸಮಾವೇಶವು ಸಂಪಾಜೆಯ ಕೊಯನಾಡು ಗಣೇಶ ಕಲಾ ಮಂದಿರದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹನಾಂಗಿ ಕಂಜಿಪಿಲಿ, ಅಧ್ಯಕ್ಷರು ಮಹಿಳಾ ಮೋರ್ಚಾ ಸಂಪಾಜೆ, ಮುಖ್ಯ ಅತಿಥಿಗಳಾಗಿ ಯಶೋಧ ರಾಮಚಂದ್ರ, ನಿವೃತ್ತ ಪ್ರಾಂಶುಪಾಲರು, ಸುಳ್ಯ ಹಾಗೂ ರಮಾದೇವಿ ಬಾಲಚಂದ್ರ ಕಳಗಿ ಉಪಸ್ಥಿತರಿದ್ದರು. ಕಾರ್ಯಕ್ರಮವು ಲೀಲಾವತಿ ಕಲಾಯಿ ಮತ್ತು ರಂಜಿನಿ ಪೆಲತಡ್ಕ ಇವರ ಪ್ರಾರ್ಥನೆಯೊಂದಿಗೆ ಮೊದಲ್ಗೊಂಡು ಪ್ರಾಸ್ತಾವಿಕವಾಗಿ ರಮಾದೇವಿ ಬಾಲಚಂದ್ರ ಕಳಗಿ ಮಾತನಾಡಿದರು. ಪ್ರಧಾನ ಭಾಷಣದಲ್ಲಿ ಯಶೋಧ ರಾಮಚಂದ್ರ, ಸಮಾಜದಲ್ಲಿ ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಪಾತ್ರದ ಬಗ್ಗೆ ಮಾತನಾಡಿದರು. ಸಮಾಜದಲ್ಲಿ ಮಹಿಳೆಯರು ಸಾಮಾಜಿಕ ಬಲಾಢ್ಯತೆಯನ್ನು ಸಾಧಿಸಬೇಕು ಹಾಗೂ ಸಾಧನೆಗಾಗಿ ರಾಜಕೀಯವಾಗಿ, ಬೌದ್ಧಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಒಂದು ಹೆಣ್ಣು ತನ್ನನ್ನು ತಾನು ತೊಡಗಿಸಿಕೊಳ್ಳಬೇಕು ಎಂದು ಮಹಿಳೆಯರನ್ನು ಪೆÇ್ರೀತ್ಸಾಹಿಸಿದರು. ಸಭೆಯಲ್ಲಿ ಗಣ್ಯರನ್ನು ಪುಷ್ಪಾವತಿ ವಿಶ್ವನಾಥ್ ಸ್ವಾಗತಿಸಿ, ಯಮುನಾ ಗಿರೀಶ್ ನಿರೂಪಿಸಿ, ವಾಣಿ ಜಗದೀಶ್ ಕೆದಂಬಾಡಿ ವಂದಿಸಿದರು. ಸಭೆಯಲ್ಲಿ ಬಿ.ಜೆ.ಪಿ ಶಕ್ತಿ ಕೇಂದ್ರದ ಸದಸ್ಯರು, ಸಂಘ-ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಸ್ತ್ರೀ ಶಕ್ತಿ ಗುಂಪಿನ ಸದಸ್ಯರುಗಳು, ಗ್ರಾಮ ಪಂಚಾಯಿತಿ ಸಂಭಾವಿತ ಅಭ್ಯರ್ಥಿಗಳು, ಪಕ್ಷದ ಹಿರಿಯರು, ಮಹಿಳಾ ಮೋರ್ಚಾ ಪ್ರತಿನಿಧಿಗಳು, ಬಿಜೆಪಿ ಮಹಿಳಾ ಕಾರ್ಯಕರ್ತರು, ಯುವ ಮೋರ್ಚಾ ಸದಸ್ಯರುಗಳು, ಬೂತ್ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರುಗಳು, ಸಮಸ್ತ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ವಿಶ್ವ ವ್ಯಾಪಿಸಿದ ಕೊರೊನಾ ವೈರಸ್‍ನಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆಯನ್ನು ನಡೆಸಲಾಯಿತು.