ಮಡಿಕೇರಿ, ಅ. 19: ಕೊಡವ ಭಾಷೆಯನ್ನು ಶೀಘ್ರದಲ್ಲೇ ಮಂಗಳೂರು ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಪ್ರಮಾಣಪತ್ರ ಕೋರ್ಸ್ ಆಗಿ ಮತ್ತು ಮುಂಗಡ ಡಿಪೆÇ್ಲಮಾ ಹಾಗೂ ಸ್ನಾತಕೋತ್ತರ ಡಿಪೆÇ್ಲಮಾ ಕೋರ್ಸ್ ಆಗಿ ವಿದ್ಯಾರ್ಥಿಗಳು ಓದಬಹುದು. ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್‍ನಿಂದ ಪಠ್ಯಕ್ರಮವನ್ನು ಅಂತಿಮ ಗೊಳಿಸಲಾಗುತ್ತಿದ್ದು, ಮುಂಬರುವ ಎರಡು ವಾರಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳಿಂದ ‘ಶಕ್ತಿ’ಗೆ ತಿಳಿದುಬಂದಿದೆ ಕೊಡವ ಭಾಷಾ ಶೈಕ್ಷಣಿಕ ಕೋರ್ಸ್‍ಗಳನ್ನು 2013 ರಲ್ಲಿಯೇ ಕರ್ನಾಟಕ ರಾಜ್ಯವು ಗುರುತಿಸಿದೆ. ಇದನ್ನು ಮಂಗಳೂರು ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಇದೀಗ ಪರಿಚಯಿಸಲಾಗುತ್ತಿದೆ. ಕೊಡವ ಭಾಷಾ ಕೋರ್ಸ್ ಅನ್ನು ಸೇರಿಸಲು ಸಿಂಡಿಕೇಟ್ ಅನುಮೋದನೆ ನೀಡಿದೆ ಮತ್ತು ಈ ಶೈಕ್ಷಣಿಕ ವರ್ಷದಿಂದ ಕಾಲೇಜುಗಳಲ್ಲಿ ಈ ಕೋರ್ಸ್ ಅನ್ನು ಪ್ರಾರಂಭಿಸಲು ನಾವು ಪ್ರಯತ್ನಿಸುತ್ತಿದ್ದೇವೆ,” ಎಂದು ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯೆ ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಪಾರ್ವತಿ ಅಪ್ಪಯ್ಯ ಖಚಿತÀ ಪಡಿಸಿದರು.ಕೊಡವ ಭಾಷೆ ಮತ್ತು ಸಂಸ್ಕøತಿಯನ್ನು ಆರು ತಿಂಗಳ ಕಾಲ ಹೆಚ್ಚುವರಿ ಪ್ರಮಾಣಪತ್ರ ಕೋರ್ಸ್ ಆಗಿ ಅಧ್ಯಯನ ಮಾಡಬಹುದು ಮತ್ತು ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದವರು ಈ ಕೋರ್ಸ್ ಅನ್ನು ಆಯ್ಕೆ ಮಾಡಲು ಅರ್ಹರಾಗಿರುತ್ತಾರೆ. ಇದಲ್ಲದೆ, ವಿದ್ಯಾರ್ಥಿಗಳು ಕೊಡವ ವಿಷಯದಲ್ಲಿ ಅಡ್ವಾನ್ಸ್ ಡಿಪೆÇ್ಲಮಾ (ಮುಂಗಡ ಡಿಪೆÇ್ಲಮಾ) ಪಡೆಯಬಹುದು ಮತ್ತು ಇದಕ್ಕೆ ಪದವಿ ಪೂರ್ವ ವಿದ್ಯೆಯ ಕನಿಷ್ಟ ಅರ್ಹತೆಯ ಅಗತ್ಯವಿರುತ್ತದೆ. ಇದಲ್ಲದೆ, ಸ್ನಾತಕೋತ್ತರ (ಪಿಜಿ) ಡಿಪೆÇ್ಲಮಾ ಕೋರ್ಸ್‍ಗಳನ್ನು ಸಹ ಪರಿಚಯಿಸಲಾಗುವುದು ಮತ್ತು ಇದಕ್ಕೆ ಕನಿಷ್ಟ ಅರ್ಹತೆ ಪದವಿ ವ್ಯಾಸಂಗ ಪೂರ್ಣಗೊಳಿಸಿರಬೇಕು.
“ಕೋರ್ಸ್‍ನ ಪಠ್ಯಕ್ರಮದ ಕೆಲಸವನ್ನು ಬಹಳ ಹಿಂದೆಯೇ ಪ್ರಾರಂಭಿಸಲಾಗಿದೆ. ಇದನ್ನು ಅಂತಿಮಗೊಳಿಸಲು ನಾವು ಅಕಾಡೆಮಿಯಿಂದ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದೇವೆ. ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯವರು ಈ ವರ್ಷ ಕೋರ್ಸ್ ಅನ್ನು ಪರಿಚಯಿಸುವುದಾಗಿ ಭರವಸೆ ನೀಡಿದ್ದಾರೆ,” ಎಂದು ಪಾರ್ವತಿ ಅವರು ವಿವರಿಸಿದರು. ಇದಲ್ಲದೆ, ಕೋರ್ಸ್ ಅನ್ನು ಕಲಿಸಲು ಶಿಕ್ಷಕರನ್ನು ಗುರುತಿಸಲಾಗುತ್ತಿದೆ.