ಪೆÇನ್ನಂಪೇಟೆ, ಅ. 19: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಹಾಗೂ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ವಿಜ್ಞಾನ ವಿಭಾಗದ ವಿದ್ಯಾರ್ಥಿ ಟಿ. ಅತುಲ್, ವಾಣಿಜ್ಯ ವಿಭಾಗದ ಬಿ.ಎಂ. ಲಿಪಿಕ, ಐ.ಎಸ್. ವಸುಂಧರ ಭಾರ್ಗವ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿಗಳು, ಕಾವೇರಿ ಕಾಲೇಜಿನಲ್ಲಿ ಕಲಿಕೆಗೆ ಪೂರಕವಾದ ಉತ್ತಮ ವಾತಾವರಣವಿದ್ದು, ಪೆÇೀಷಕರು, ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ಸ್ನೇಹಿತರ ಸಹಕಾರದ ಜೊತೆಗೆ ಉತ್ತಮ ಪ್ರಯತ್ನದ ಫಲವಾಗಿ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

ಗೋಣಿಕೊಪ್ಪಲು ಕಾವೇರಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕೆ. ಜಿ. ಉತ್ತಪ್ಪ, ಉಪಾಧ್ಯಕ್ಷ ಎಂ.ಕೆ. ಮೊಣ್ಣಪ್ಪ, ಖಜಾಂಚಿ ಸಿ.ಡಿ. ಮಾದಪ್ಪ, ಪದವಿ ಕಾವೇರಿ ಕಾಲೇಜು ಪ್ರಾಂಶುಪಾಲ ಪೆÇ್ರ. ಕೆ.ವಿ. ಕುಸುಮಾಧರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಪೆÇ್ರ. ಎಂ.ಬಿ. ಕಾವೇರಪ್ಪ, ಪೆÇ್ರ. ಎಂ.ಎಸ್. ಭಾರತಿ, ಉಪನ್ಯಾಸಕರಾದ ಕುಸುಮ್ ಹಾಗೂ ಪೆÇೀಷಕರು ಹಾಜರಿದ್ದರು.