ಮಡಿಕೇರಿ, ಅ. 19: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಈ ಬಾರಿ ದಸರಾ ಅಂಗವಾಗಿ ಜಿಲ್ಲಾ ಮಟ್ಟದ ಅಂತರ್ಜಾಲ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ.

ಜಿಲ್ಲೆಯ ಕವಿಗಳಿಗೆ ಹಾಗೂ ಕಲಾವಿದರಿಗೆ ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಕೊರೊನಾದಿಂದ ತಮ್ಮ ಪ್ರತಿಭೆ ತೋರಲು ಸಮಸ್ಯೆಯಾಗಿರುವ ಕಾರಣ ಅಂತರ್ಜಾಲದಲ್ಲಿ ಕವಿಗೋಷ್ಠಿ ಏರ್ಪಡಿಸಿದೆ, ಭಾಗವಹಿಸಿದ ಕವಿಗಳಿಗೆ ಅಂಚೆ ಮುಖಾಂತರ ಪ್ರಶಂಸನಾ ಪತ್ರ ಹಾಗೂ ನೆನಪಿನಕಾಣಿಕೆ ಕಳುಹಿಸಲಾಗುವುದು. ಮೊದಲು ಹೆಸರು ನೋಂದಾಯಿಸಿಕೊಂಡ 30 ಕವಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು.

ತಾ. 24 ರಂದು ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ನೋಂದಾಯಿಸಿ ಕೊಂಡವರಿಗೆ ನಂತರ ಅಂತರ್ಜಾಲ ಜೋಡಣೆ ಕಳುಹಿಸಲಾಗುವುದು. ಹೆಚ್ಚಿನ ಮಾಹಿತಿಗೆ 9980988123 ಸಂಪರ್ಕಿಸ ಬಹುದು ಎಂದು ಕಸಾಪದ ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.