ಸುಂಟಿಕೊಪ್ಪ, ಅ. 20: ಕುಡಿಯುವ ನೀರಿನ ಪೈಪ್ ದುರಸ್ತಿ ಸಂಬಂಧ ರಸ್ತೆ ಬದಿ ಅಗೆದ ಗುಂಡಿಯಿಂದ ರಸ್ತೆ ಹಾಳಾಗಿದ್ದು, ವಾಹನ ಸಂಚಾರಕ್ಕೆ ಹರಸಾಹಸಪಡುವಂತಾಗಿದೆ. ಐಗೂರು ಮಾರಿಗುಡಿ ದೇವಾಲಯದ ಕೆಳಭಾಗದ ಐಗೂರು ಯಡವಾರೆ ರಸ್ತೆ ಮರು ಡಾಮರೀಕರಣ ಕಳೆದ ಜೂನ್ ತಿಂಗಳಿನಲ್ಲಿ ನಡೆದಿದ್ದು, ಅಲ್ಲಿ ಇದೀಗ ಕಳಪೆ ಕಾಮಗಾರಿಯಿಂದ ರಸ್ತೆ ಗುಂಡಿ ಬಿದ್ದಿದೆ. ಅಲ್ಲದೆ ಕುಡಿಯುವ ನೀರಿನ ಪೈಪ್ ದುರಸ್ತಿಪಡಿಸಲು ಗ್ರಾ.ಪಂ. ಗುಂಡಿ ತೆಗೆದಿದ್ದು, ಅದನ್ನು ಮುಚ್ಚದೆ ಬಹಳ ತೊಂದರೆ ಉಂಟಾಗಿದೆ. ಕೂಡಲೇ ಸರಿಪಡಿಸುವಂತೆ ಈ ಭಾಗದ ನಿವಾಸಿಗಳು ಒತ್ತಾಯಿಸಿದ್ದಾರೆ.