ಮಡಿಕೇರಿ, ಅ. 20: ಭಾರತದಾದ್ಯಂತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಶಿಕ್ಷಣ ಸಚಿವಾಲಯ, ಭಾರತ ಸರ್ಕಾರದಡಿ ಸ್ಥಾಪನೆಯಾಗಿದ್ದು ಸ್ವಾತಂತ್ರ್ಯ ಸ್ವಾಯತ್ತ, ಸ್ವಾವಲಂಬಿ ಹಾಗೂ ಸ್ವಯಂ ನಿರಂತರ ಸರ್ವ ಶ್ರೇಷ್ಠ ಟೆಸ್ಟಿಂಗ್ ಸಂಸ್ಥೆಯಾಗಿದ್ದು, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಓಖಿಂ) ಅವರು 2020-22ರ ಶೈಕ್ಷಣಿಕ ವರ್ಷಕ್ಕಾಗಿ 6ನೇ ತರಗತಿ ಮತ್ತು 9ನೇ ತರಗತಿಗಳ ಪ್ರವೇಶಕ್ಕಾಗಿ ದೇಶದಾದ್ಯಂತ 33 ಸೈನಿಕ ಶಾಲೆಗಳಲ್ಲಿ ಎಐಎಸ್ಎಸ್ಇಇ-2021 ಪ್ರವೇಶ ಪರೀಕ್ಷೆಯನ್ನು ನಡೆಸುವುದು. ಸೈನಿಕ ಶಾಲೆಗಳು ಇಂಗ್ಲಿಷ್ ಮಾಧ್ಯಮ ವಸತಿ ಶಾಲೆಗಳಾಗಿ ಸಿಬಿಎಸ್ಇ ಅಂಗ ಸಂಸ್ಥೆಗಳಾಗಿವೆ ಮತ್ತು ಸೈನಿಕ ಶಾಲಾ ಸೊಸೈಟಿಯಿಂದ (ರಕ್ಷಣಾ ಸಚಿವಾಲಯದ ಅಡಿಯಲ್ಲಿ) ಕಾರ್ಯ ನಿರ್ವಹಿಸುತ್ತಿವೆ. ಈ ಶಾಲೆಗಳು ಅಧಿಕಾರಿಗಳನ್ನಾಗಿ ನ್ಯಾಷನಲ್ ಡಿಫೆನ್ಸ್ ಆಕಾಡೆಮಿಗಳಿಗಾಗಿ ಅಭ್ಯಥಿಗಳನ್ನು ತಯಾರು ಮಾಡುವುದು.
ಪರೀಕ್ಷೆಯು ಜನವರಿ 10, 2021 ಭಾನುವಾರಂದು ನಡೆಯಲಿದ್ದು ಪರೀಕ್ಷೆಯ ಮಾದರಿಯು ಪೆನ್ ಪೇಪರ್ (ಒಎಂಆರ್ ಶೀಟ್ ಆಧಾರಿತ), ಪರೀಕ್ಷೆ ಪ್ರಶ್ನೆ ಪತ್ರಿಕೆ ನಮೂನೆ-ಬಹು ಆಯ್ಕೆ ಪ್ರಶ್ನೆಗಳು, ಪರೀಕ್ಷೆ ನಗರಗಳು ಮಾಹಿತಿ ಕೈಪಿಡಿಯಲ್ಲಿ ಸೂಚಿಸಿರುವಂತೆ, 6ನೇ ತರಗತಿಗೆ ಹೊಂದಿರಬೇಕಾದ ಅರ್ಹತೆಗಳು ಅಭ್ಯರ್ಥಿಗಳು 2021 ರ ಮಾರ್ಚ್ 31 ರಂತೆ ಮತ್ತು 12 ವರ್ಷಗಳ ನಡುವೆ ಇರಬೇಕು. 6ನೇ ತರಗತಿಯಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಎಲ್ಲಾ ಸೈನಿಕ ಶಾಲೆಗಳಲ್ಲಿ ಪ್ರವೇಶ ತೆರೆದಿರುತ್ತದೆ. 9ನೇ ತರಗತಿಗೆ ಹೊಂದಿರಬೇಕಾದ ಅರ್ಹತೆಗಳು ಅಭ್ಯರ್ಥಿಗಳು 2021 ರ ಮಾರ್ಚ್ 31 ರಂತೆ 13 ಮತ್ತು 15 ವರ್ಷಗಳ ನಡುವೆ ಇರಬೇಕು. ಪ್ರವೇಶ ಸಮಯದಲ್ಲಿ ಒಂದು ಮಾನ್ಯತೆ ಹೊಂದಿರುವ ಶಾಲೆಯಿಂದ 8ನೇ ತರಗತಿ ತೇರ್ಗಡೆ ಹೊಂದಿರಬೇಕು. ಪರೀಕ್ಷಾ ಶುಲ್ಕವು ಪ.ಜಾ/ಪ.ಪಂ.ಗಳಿಗೆ ರೂ. 400 ಇತರ ಎಲ್ಲಾ ವರ್ಗಗಳಿಗೆ ರೂ. 550 ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಪರೀಕ್ಷೆಗೆ ಸಂಬಂಧಿಸಿದ ಯೋಜನೆ, ಕಾಲಾವಧಿ, ಮಾಧ್ಯಮ, ಪರೀಕ್ಷೆಯ ಪಠ್ಯಕ್ರಮ, ಸೈನಿಕ ಶಾಲೆಗಳ ಪಟ್ಟಿ ಹಾಗೂ ತಾತ್ಕಾಲಿಕ ಪ್ರವೇಶ, ಸೀಟುಗಳ ಮೀಸಲು, ಪರೀಕ್ಷಾ ನಗರಗಳು, ಕೇಂದ್ರಗಳು, ತೇರ್ಗಡೆ ಅವಶ್ಯಕತೆಗಳು, ಮುಖ್ಯ ದಿನಾಂಕ ವೆಬ್ಸೈಟ್ WWW.ಟಿಣಚಿ.ಚಿಛಿ.iಟಿ ಯಲ್ಲಿರುವ ಮಾಹಿತಿ ಕೈಪೀಡಿಯಲ್ಲಿ ಲಭ್ಯವಿರುವುದು. 2021 ರ ಎಐಎಸ್ಎಸ್ಇಇ ಪರೀಕ್ಷೆಗಾಗಿ ಪ್ರವೇಶ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ವಿವರವಾದ ಮಾಹಿತಿ ಕೈಪಿಡಿ ಓದಿಕೊಂಡಿರಬೇಕು ಹಾಗೂ ಆನ್ಲೈನ್ ಮೂಲಕ ಮಾತ್ರ ವೆಬ್ಸೈಟ್ hಣಣಠಿs://ಚಿissee.ಟಿಣಚಿ.ಟಿiಛಿ.iಟಿ ಸಹಾಯದಿಂದ ನವೆಂಬರ್ 19 ರೊಳಗೆ ಅರ್ಜಿ ಸಲ್ಲಿಸಬೇಕು. ಪರೀಕ್ಷಾ ಶುಲ್ಕವನ್ನು ಸಹ ಆನ್ಲೈನ್ ಮೂಲಕ ಪೇಮೆಂಟ್ ಗೇಟ್ವೇಗಗಳಾದ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಪೇಟಿಎಂ ವಾಲೆಟ್ ಮೂಲಕ ಪಾವತಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ಹಿರಿಯ ನಿರ್ದೇಶಕರು ತಿಳಿಸಿದ್ದಾರೆ.