ಸಿದ್ದಾಪುರ, ಅ. 19: ಮನೆಯೊಳಗಿದ್ದ ಹಾವೊಂದನ್ನು ಸೆರೆಹಿಡಿಯುವಲ್ಲಿ ಉರಗ ಪ್ರೇಮಿ ಸುರೇಶ್ ಪೂಜಾರಿ ಯಶಸ್ವಿಯಾಗಿದ್ದಾರೆ. ಗುಹ್ಯ ಗ್ರಾಮದ ಕಕ್ಕಟ್ಟುಕಾಡು ನಿವಾಸಿ ಮಣಿ ಎಂಬವರ ಮನೆಯ ಒಳಗಿದ್ದ ನಾಗರ ಹಾವೊಂದನ್ನು ಉರಗ ಪ್ರೇಮಿ ಸುರೇಶ್ ಅವರು ಸೆರೆ ಹಿಡಿದು ಮಾಲ್ದಾರೆ ಅರಣ್ಯ ಪ್ರದೇಶದೊಳಗೆ ಬಿಟ್ಟಿದ್ದಾರೆ.