ನಾಪೆÇೀಕ್ಲು, ಅ. 20: ನಾಪೆÇೀಕ್ಲು ಪಾರಾಣೆ ಮುಖ್ಯ ರಸ್ತೆಯ ಬೇತು ಗ್ರಾಮದಲ್ಲಿ ಒಂದು ಕಿ.ಮೀ ರಸ್ತೆ ಡಾಮರೀಕರಣಗೊಳ್ಳದೆ ಸಂಪೂರ್ಣ ದುಸ್ಥಿತಿಯಿಂದ ಕೂಡಿದೆ. ರಸ್ತೆ ಡಾಮರೀಕರಣವನ್ನು ಕೂಡಲೇ ಪೂರ್ಣಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ರಸ್ತೆ ತಡೆ ಮಾಡಿದರು.

ಬಳಿಕ ರಸ್ತೆಯಲ್ಲಿನ ಗುಂಡಿಗಳಿಗೆ ಮಣ್ಣು ತುಂಬಿ ಶ್ರಮದಾನ ನಡೆಸಿದರು. ಕಡಂಗ - ಬೇತು ರಸ್ತೆ ನಿರ್ಮಾಣ ಕಾಮಗಾರಿಗೆ 7 ಕೋಟಿ ರೂ. ಹಣ ಮಂಜೂರಾಗಿದ್ದು ಕಡಂಗದಿಂದ ಪಾರಾಣೆವರೆಗೆ ಮಾತ್ರ ರಸ್ತೆ ನಿರ್ಮಾಣ ಕಾರ್ಯವಾಗಿದೆ. ಮುಂದುವರಿದ ರಸ್ತೆಯ ಒಂದು ಕಿ.ಮೀ. ಅಂತರಕ್ಕೆ ಜಲ್ಲಿಕಲ್ಲು ತುಂಬಿ ಡಾಮರೀಕರಣ ಮಾಡದೆ ಕೆಲಸ ಸ್ಥಗಿತಗೊಳಿಸಲಾಗಿದೆ. ಎರಡು ವರ್ಷದಿಂದ ಕಾಮಗಾರಿ ಪೂರ್ಣಗೊಳ್ಳದೆ ರಸ್ತೆಗಳಲ್ಲಿ ಹೊಂಡಗಳಾಗಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದವರಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ನೀರು ಹರಿದು ಹೋಗಲು ಮೂರು ಮೋರಿಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು ಮಳೆಗಾಲದಲ್ಲಿ ನೀರು ಸರಿಯಾಗಿ ಹರಿದುಹೋಗದೆ ರಸ್ತೆ ಕೆಸರುಮಯವಾಗಿ ಸಂಚಾರಕ್ಕೆ ಸಮಸ್ಯೆಯಾಗಿದೆ. ರಸ್ತೆಯನ್ನು ಕೂಡಲೇ ಡಾಮರೀಕರಣಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು. ಬೇತು ಗ್ರಾಮದಿಂದ ಮಡಿವಾಳರಕೇರಿಗೆ ತೆರಳುವ ರಸ್ತೆಯು ಸಂಪೂರ್ಣ ದುಸ್ಥಿತಿಯಿಂದ ಕೂಡಿದೆ. ಒಂದು ಕಿ.ಮೀ. ಅಂತರದ ರಸ್ತೆಯನ್ನು ಡಾಮರೀಕರಣ ಗೊಳಿಸಬೇಕು ಎಂದು ಕಾಡೇರಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.