ಶ್ರೀಮಂಗಲ, ಅ. 19 : ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ವ್ಯವಸ್ಥಾಪನಾ ಸಮಿತಿಯ ಗೊಂದಲಕಾರಿ ಹಾಗೂ ಅಪ್ರೌಢಿಮೆಯ ನಿರ್ಧಾರದಿಂದ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ನೈಜ ಭಕ್ತರು ಆಗಮಿಸಲು ತೀವ್ರ ತೊಂದರೆಯನ್ನು ನೀಡಿದ್ದು, ಇದರಿಂದ ತೀರ್ಥೋದ್ಭವಕ್ಕೆ ಆಗಮಿಸಲು ಬಯಸಿದ್ದ ಸಾವಿರಾರು ಭಕ್ತರು ವಂಚಿತರಾಗುವಂತೆ ಆಗಿದೆ. ಇದು ಅಕ್ಷಮ್ಯ ಎಂದು ಕಾವೇರಿ ಭಕ್ತ ಜನ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಪೆÇನ್ನಂಪೇಟೆಯಲ್ಲಿ ಸಂಘದ ಅಧ್ಯಕ್ಷ ಕಳ್ಳಿಚಂಡ ರಾಬಿನ್‍ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾ. 17ರ ಮುಂಜಾನೆ ನಡೆದ ತೀರ್ಥೋದ್ಭವಕ್ಕೆ ಜಿಲ್ಲೆಯ ವಿವಿಧೆಡೆ ಯಿಂದ 16ರ ಮಧ್ಯರಾತ್ರಿಯಿಂದಲೇ ಆಗಮಿಸಿದ ಭಕ್ತರನ್ನು ತಡೆದು ಕಿರುಕುಳ ನೀಡುವ ಮೂಲಕ ತೊಂದರೆ ನೀಡಿರುವುದು ಭಕ್ತರ ಭಾವನೆಗೆ ತೀವ್ರ ನೋವುಂಟುಮಾಡಿದೆ. ಇದಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ವ್ಯವಸ್ಥಾಪನಾ ಸಮಿತಿ ನೇರವಾಗಿ ಹೊಣೆಯಾಗಿದೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ತೀರ್ಥೋದ್ಭವಕ್ಕೆ ಎರಡು ದಿನದ ಹಿಂದೆ ಕೊನೆ ಗಳಿಗೆಯಲ್ಲಿ ತೀರ್ಥೋದ್ಭವಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೂ ಕೋವಿಡ್ ನೆಗೆಟಿವ್ ವರದಿ ಪತ್ರ ಖಡ್ಡಾಯಗೊಳಿ ಸಲಾಯಿತು. ಇದೊಂದು ಭಕ್ತಾದಿಗಳನ್ನು ಕ್ಷೇತ್ರಕ್ಕೆ ಬರದಂತೆ ತಡೆಯುವ ಪೂರ್ವಾಗ್ರಹ ಯೋಜನೆ ಯಾಗಿರುವುದು ಸ್ಪಷ್ಟವಾಯಿತು. ಏಕೆಂದರೆ ಒಂದು ವೇಳೆ ಕೋವಿಡ್ ನಿಯಮವನ್ನು ಪ್ರಾಮಾಣಿಕವಾಗಿ ಪಾಲಿಸುವುದು, ಸೋಂಕು ತಡೆಗಟ್ಟಲು ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಮೊದಲ ಪೂರ್ವಭಾವಿ ಸಭೆಯಲ್ಲಿ ಇದನ್ನು ಖಡ್ಡಾಯಗೊಳಿಸಿ ಕೋವಿಡ್ ಪರೀಕ್ಷೆ ಮಾಡಲು ಸರಕಾರ ಸೂಕ್ತ ವ್ಯವಸ್ಥೆಯನ್ನು ಜಿಲ್ಲೆಯ ವಿವಿಧೆಡೆ ಭಕ್ತಾದಿಗಳಿಗೆ ಕಲ್ಪಿಸಬೇಕಿತ್ತು ಎಂದು ಸಭೆ ಅಸಮಾಧಾನ ವ್ಯಕ್ತಪಡಿಸಿತು.

ಕೋವಿಡ್ ಪರೀಕ್ಷೆ ಖಡ್ಡಾಯ ಗೊಳಿಸಿದ ನಂತರ ತಾ. 16ರ ಸಂಜೆ ಉಸ್ತುವಾರಿ ಸಚಿವರು ಜಿಲ್ಲಾಡಳಿತ ಪ್ರಮುಖರು, ವ್ಯವಸ್ಥಾಪನಾ ಸಮಿತಿಯವರು, ಮಾಧ್ಯಮದವರು ತಲಕಾವೇರಿಗೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದರು. ಆ ಸಂದರ್ಭ ಕೋವಿಡ್ ನಿಯಮವನ್ನು ಯಾಕೆ ಪಾಲಿಸಲಿಲ್ಲ. ಇಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಕೋವಿಡ್ ನೆಗೆಟಿವ್ ಪತ್ರ ಇತ್ತೆ ಎಂದು ಪ್ರಶ್ನಿಸಿದ ಅವರು ತಾ. 17ರ ಮುಂಜಾನೆ ತೀರ್ಥೋದ್ಭವಕ್ಕೆ ಬಂದೋಬಸ್ತ್ ಕಲ್ಪಿಸಿದ್ದ ಸುಮಾರು 500 ಪೆÇಲೀಸರು, ಸುಮಾರು 100 ಮಾಧ್ಯಮದವರು, ಸಚಿವರು, ಶಾಸಕರು, ವಿ.ವಿ.ಐ.ಪಿ.ಗಳು, ವಿಐಪಿಗಳು ಮತ್ತು ಅವರ ಕುಟುಂಬಕ್ಕೆ ಕೋವಿಡ್ ಪರೀಕ್ಷೆ ಮಾಡಿ ನೆಗೆಟಿವ್ ವರದಿಯ ಪತ್ರ ಇತ್ತೆ ಎಂಬದನ್ನು ಸಭೆಯಲ್ಲಿ ಪ್ರಶ್ನಿಸಲಾಯಿತು.

ತೀರ್ಥೋದ್ಭವ ಸಂದರ್ಭ ಪುರೋಹಿತರೊಬ್ಬರು ತೀರ್ಥವನ್ನು ಪೆÇ್ರೀಕ್ಷಣೆ ಮಾಡುವ ಸಂದರ್ಭ ತಮ್ಮ ತಲೆಗೆ ಮೊದಲು ಹಾಕಿಕೊಂಡರು. ತಮ್ಮ ತಲೆಯಿಂದ ಬಿದ್ದ ತೀರ್ಥ ಕುಂಡಿಕೆಗೆ ಬಿದ್ದಿರುವುದು ಕ್ಷೇತ್ರದ ಪಾವಿತ್ರ್ಯತೆ ಹಾಗೂ ಆಚಾರಕ್ಕೆ ಧÀಕ್ಕೆ ತಂದಿದೆ ಎಂದು ಸಭೆ ಅಸಮಾಧಾನ ವ್ಯಕ್ತಪಡಿಸಿತು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರು ಭಕ್ತರ ಭಾವನೆಗೆ ಪೂರ್ವಭಾವಿ ಸಭೆಯಲ್ಲಿಯೇ ಸೂಕ್ತ ನಿರ್ಧಾರ ಕೈಗೊಂಡು ಕ್ಷೇತ್ರಕ್ಕೆ ಆಗಮಿಸಲು ಅವಕಾಶ ಕಲ್ಪಿಸಿ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸದೇ ತೀರ್ಥೋದÀ್ಭವ ಸಂದರ್ಭ ಕ್ಷೇತ್ರದಿಂದ ಅಸಮಾಧಾನಗೊಂಡು ಹೊರತೆರಳಿರು ವುದು ಸರಿಯಲ್ಲ ಎಂದು ಸಭೆ ಅಭಿಪ್ರಾಯಿಸಿತು.

ಕ್ಷೇತ್ರಕ್ಕೆ ಪ್ರವೇಶಿಸಲು ಭಕ್ತಾದಿಗಳನ್ನು ಪೆÇಲೀಸರು ತಡೆದಾಗ ಕೊನೆಗಳಿಗೆಯಲ್ಲಿ ಶಾಸಕ ಅಪ್ಪಚ್ಚುರಂಜನ್, ಶಾಸಕಿ ವೀಣಾ ಅಚ್ಚಯ್ಯ ಹಾಗೂ ಕೆ.ಪಿ. ಚಂದ್ರಕಲಾ ಅವರು ಭಕ್ತಾದಿಗಳ ಭಾವನೆಗೆ ಸ್ಪಂದಿಸಿ ಪ್ರವೇಶಿಸಲು ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕ್ಷೇತ್ರದಲ್ಲಿದ್ದು, ಭಕ್ತರಿಗೆ ಬೆಂಬಲವಾಗಿ ನಿಲ್ಲದೆ ಪೂರ್ವಯೋಜಿತ ಗೋಣಿಕೊಪ್ಪ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ತೀರ್ಥೋದ್ಭವ ಸಮಯದಲ್ಲಿ ಪಾಲ್ಗೊಂಡಿದ್ದರು. ಹಾಗಿದ್ದರೆ ಪೂರ್ವಭಾವಿ ಸಭೆಯಲ್ಲಿ ಶಿಷ್ಟಾಚಾರ ದಂತೆ ಭಾಗವಹಿಸಿ ನಿಯಮ ರೂಪಿಸುವ ಅಗತ್ಯತೆ ಏನಿತ್ತು ಎಂದು ಸಭೆಯಲ್ಲಿ ಪ್ರಶ್ನಿಸಲಾಯಿತು.

ಸಭೆಯಲ್ಲಿ ಕಾವೇರಿ ಭಕ್ತ ಸಂಘದ ಅಚ್ಚಂಡೇರ ಪವನ್ ಪೆಮ್ಮಯ್ಯ, ನಿವೃತ್ತ ಸೇನಾಧಿಕಾರಿ ಚೆಪ್ಪುಡೀರ ಕರ್ನಲ್ ಮುತ್ತಣ್ಣ, ಚೊಟ್ಟೆಯಕ್‍ಮಾಡ ರಾಜೀವ್ ಬೋಪಯ್ಯ, ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಚೆಪ್ಪುಡೀರ ಶೆರಿ ಸುಬ್ಬಯ್ಯ, ಮಲ್ಚೀರ ಶಾನ್ ಬೋಪಯ್ಯ ಪಾಲ್ಗೊಂಡಿದ್ದರು.