ಮಡಿಕೇರಿ, ಅ. 19: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ದೈಹಿಕ ಚಿಕಿತ್ಸೆಯೊಂದಿಗೆ ಕೆಲವು ಆಸ್ಪತ್ರೆಗಳಲ್ಲಿ ಮಾನಸಿಕವಾಗಿ ಸಬಲರಾಗಲು ‘ಆ್ಯಬ್ಸ್ಟ್ಯಾಕ್ಟ್’ (ಅಮೂರ್ತ) ಚಿತ್ರಗಳನ್ನು ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಕೊಠಡಿಯ ಗೋಡೆಗಳಿಗೆ ಅಳವಡಿಸಲಾಗುತ್ತದೆ. ಈ ಕುರಿತು ಜಾಗೃತಿ ಮೂಡಿಸಲು ಮಡಿಕೇರಿಯ ಕಲಾವಿದ ಸಂದೀಪ್ ಕುಮಾರ್ ನಗರದ ಪ್ರವಾಸಿತಾಣ ಅಬ್ಬಿಫಾಲ್ಸ್ನಲ್ಲಿ ‘ಆ್ಯಬ್ಸ್ಟ್ಯಾಕ್ಟ್’ ಚಿತ್ರ ಚಿತ್ರಿಸುವುದರೊಂದಿಗೆ ಪ್ರದರ್ಶನ ಹಮ್ಮಿಕೊಂಡಿದ್ದರು.
ಕೊರೊನಾ ಹರಡುತ್ತಿರುವ ಈ ಸಮಯದಲ್ಲಿ ವಿವಿಧ ಚಿಕಿತ್ಸೆಗಳೊಂದಿಗೆ ತಮ್ಮ ‘ಆ್ಯಬ್ಸ್ಟ್ಯಾಕ್ಟ್’ ಚಿತ್ರ ಕೂಡ ರೋಗಿಗಳಿಗೆ ಮಾನಸಿಕವಾಗಿ ಬಲ ನೀಡಲಿದ್ದು, ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ