ಮಡಿಕೇರಿ, ಅ. 19: ಕಡಗದಾಳು ಬಳಿಯ ತೂರ ಬಾಣೆಯ ಸಮೀಪದ ನಿವಾಸಿ ಮುಕ್ಕಾಟೀರ ಬಾಬು ಅವರ ಗಬ್ಬದ ಹಸುವನ್ನು ಹುಲಿ ಕೊಂದು ಹಾಕಿದೆ. ತಾ. 18 ರಂದು 11.30 ಬೆಳಿಗ್ಗೆ ಹುಲಿ ದಾಳಿಗೆ ಹಸು ಬಲಿಯಾಗಿದೆ. ಕಳೆದ 4 ದಿನಗಳ ಹಿಂದೆಯಷ್ಟೆ ಮುಕ್ಕಾಟೀರ ಸೋಮಯ್ಯ ಅವರ ಕರುವನ್ನು ಹುಲಿ ಬಲಿ ಪಡೆದಿತ್ತು. ಈ ಭಾಗದಲ್ಲಿ ಮೊದಲನೆಯ ಬಾರಿಗೆ ಹುಲಿ ದಾಳಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.