ಕೂಡಿಗೆ, ಅ. 18: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದ ನೂತನ ಕ್ರೀಡಾ ಸಭಾಂಗಣದ ಮುಂಭಾಗದಲ್ಲಿ ಹುದುಗೂರು ಗ್ರಾಮ ವ್ಯಾಪ್ತಿಯ ಬಿಜೆಪಿ ಬೂತ್ ಸಮಿತಿಯ ಸಭೆಯು ಬೂತ್‍ನ ಅಧ್ಯಕ್ಷ ಟಿ.ಎಂ. ಮಲ್ಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಪಕ್ಷ ಸಂಘಟನೆ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯು ಗ್ರಾಮಮಟ್ಟದ ಪ್ರತಿಯೊಬ್ಬ ವ್ಯಕ್ತಿಗೂ ಸಿಗಬೇಕು ಅದರ ತಿಳುವಳಿಕೆಯನ್ನು ಬೂತ್ ಮಟ್ಟದ ಸಮಿತಿಯ ಗ್ರಾಮಸ್ಥರಿಗೆ ತಿಳಿಸಬೇಕು ಎಂದರು.

ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ಗಣಿಪ್ರಸಾದ್, ತಾಲೂಕುಮಂಡಲದ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ಮಹಿಳಾ ಕಾರ್ಯದರ್ಶಿ ಇಂದಿರಾ, ಕೂಡಿಗೆ ಶಕ್ತಿ ಕೇಂದ್ರದ ಅಧ್ಯಕ್ಷ ಕೆ.ಟಿ. ಗಿರೀಶ್, ಪರಿಶಿಷ್ಟ ವರ್ಗದ ಅಧ್ಯಕ್ಷ ಕೃಷ್ಣ ಸೇರಿದಂತೆ ಗ್ರಾಮದ ವಿವಿಧ ಘಟಕದ ಅಧ್ಯಕ್ಷರು ಹಾಗೂ ಮಹಿಳಾ ಸದಸ್ಯರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.