ಮಡಿಕೇರಿ, ಅ. 18: ಕೊಡಗು ಜಿಲ್ಲಾ ಪೊಲೀಸ್ ಸಶಸ್ತ್ರದಳದಲ್ಲಿ ಖಾಲಿ ಇರುವ 50 ಹುದ್ದೆಗಳ ಭರ್ತಿಗಾಗಿ ಇಂದು ನಗರದ ನಾಲ್ಕು ಕಡೆಗಳಲ್ಲಿ ಲಿಖಿತ ಪರೀಕ್ಷೆ ಏರ್ಪಡಿಸಲಾಗಿತ್ತು. ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು, ಸರಕಾರಿ ಪ.ಪೂ. ಕಾಲೇಜು, ಸಂತ ಜೋಸೆಫರ ಪ್ರೌಢಶಾಲೆ ಹಾಗೂ ಪ.ಪೂ. ಕಾಲೇಜುಗಳಲ್ಲಿ ಪರೀಕ್ಷೆ ಏರ್ಪಡಿಸಿ, ಕೊರೊನಾ ಸಂಬಂಧ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಈ ವೇಳೆ 1120 ಮಂದಿ ಪರೀಕ್ಷೆಗೆ ಹಾಜರಾಗಿದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.