ಮಡಿಕೇರಿ, ಅ. 18: ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಗೆ ಕಪ್ಪುಚುಕ್ಕಿ ತರುವ ರೀತಿಯಲ್ಲಿ ನಿವೇಶನದ ವಿಚಾರವನ್ನು ಮುಂದಿಟ್ಟು ಕೊಂಡು ಸಂಸ್ಥೆಯ ಕೆಲವು ಸದಸ್ಯರು ಮಾಡುತ್ತಿರುವ ಆರೋಪಗಳು ಖಂಡನೀಯವೆಂದು ತಿಳಿಸಿರುವ ಆಡಳಿತ ಮಂಡಳಿಯ ಅಧ್ಯಕ್ಷ ಡಿ.ಬಿ. ಸೋಮಪ್ಪ, ಆಧಾರ ರಹಿತ ಹೇಳಿಕೆಗಳ ವಿರುದ್ಧ ಕಾನೂನು ರೀತಿಯ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕರರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಹೆಸರನ್ನು ದುರುಪಯೋಗಪಡಿಸಿಕೊಂಡು ಶಿಕ್ಷಕರಿಗೆ ನಿವೇಶನ ಕೊಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೆಲವರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲವೆಂದು ಸ್ಪಷ್ಟಪಡಿಸಿದರು.
ಸಂಸ್ಥೆಯ ನಿರ್ದೇಶಕ ಹೆಚ್.ಎಲ್. ಚೇತನ್ ಮಾತನಾಡಿ, ಕಳೆದ 2019ರ ಮಾ. 23 ರಂದು ಮಡಿಕೇರಿ, ಅ. 18: ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಗೆ ಕಪ್ಪುಚುಕ್ಕಿ ತರುವ ರೀತಿಯಲ್ಲಿ ನಿವೇಶನದ ವಿಚಾರವನ್ನು ಮುಂದಿಟ್ಟು ಕೊಂಡು ಸಂಸ್ಥೆಯ ಕೆಲವು ಸದಸ್ಯರು ಮಾಡುತ್ತಿರುವ ಆರೋಪಗಳು ಖಂಡನೀಯವೆಂದು ತಿಳಿಸಿರುವ ಆಡಳಿತ ಮಂಡಳಿಯ ಅಧ್ಯಕ್ಷ ಡಿ.ಬಿ. ಸೋಮಪ್ಪ, ಆಧಾರ ರಹಿತ ಹೇಳಿಕೆಗಳ ವಿರುದ್ಧ ಕಾನೂನು ರೀತಿಯ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕರರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಹೆಸರನ್ನು ದುರುಪಯೋಗಪಡಿಸಿಕೊಂಡು ಶಿಕ್ಷಕರಿಗೆ ನಿವೇಶನ ಕೊಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೆಲವರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲವೆಂದು ಸ್ಪಷ್ಟಪಡಿಸಿದರು.
ಸಂಸ್ಥೆಯ ನಿರ್ದೇಶಕ ಹೆಚ್.ಎಲ್. ಚೇತನ್ ಮಾತನಾಡಿ, ಕಳೆದ 2019ರ ಮಾ. 23 ರಂದು ಸಂಸ್ಥೆಯ ಹೆಸರು ಬಳಸಿಕೊಳ್ಳಬಹು ದೆಂದು ಅವಕಾಶ ನೀಡಲಾಗಿತ್ತು. ಪ್ರಸ್ತುತ ಕೊಪ್ಪ ಸಮೀಪದ ದೊಡ್ಡಹೊನ್ನೂರಿನಲ್ಲಿ 20 ರಿಂದ 22 ಮಂದಿ ಶಿಕ್ಷಕರು ನಿವೇಶನವನ್ನು ಪಡೆದುಕೊಂಡಿದ್ದಾರೆ. ಶಿಕ್ಷಕರಿಗೆ ನಿವೇಶನಗಳನ್ನು ಕಲ್ಪಿಸಿಕೊಡುವುದೇ ನಮ್ಮ ಉದ್ದೇಶವಾಗಿತ್ತು. ಸೆ. 22 ರಂದು ನಡೆದ ಸಂಸ್ಥೆಯ ಮಹಾಸಭೆಯಲ್ಲಿ ನಿವೇಶನದ ಬಗ್ಗೆ ಪ್ರಸ್ತಾಪವಾಗಿದ್ದು, ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಬಹುತೇಕ ಸದಸ್ಯರು ಸಹಮತ ನೀಡಿದ್ದರು ಎಂದು ಚೇತನ್ ತಿಳಿಸಿದರು. ಪ್ರಸಕ್ತ ಸಾಲಿನ ಅ. 11 ರಂದು ನಡೆದ ಮಹಾಸಭೆಯಲ್ಲಿ ಮತ್ತೆ ಹಿಂದಿನ ಮಹಾಸಭೆಯಲ್ಲಿ ಪ್ರಸ್ತಾಪವಾಗಿದ್ದ ನಿವೇಶನ ವಿಚಾರವನ್ನೆ ಆರು ಮಂದಿ ಸದಸ್ಯರು ವೈಯಕ್ತಿಕ ಹಿತಾಸಕ್ತಿ ಹಿನ್ನೆಲೆ ಪ್ರಸ್ತಾಪಿಸಿ ಕಾಲಹರಣ ಮಾಡಿದರು. ಆಡಳಿತ ಮಂಡಳಿ ನೀಡಿದ ಸಮಜಾಯಿಷಿಕೆಯನ್ನು ದಿಕ್ಕರಿಸಿ, ಸಂಸ್ಥೆಯ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ಟೀಕಿಸಿದರು.
ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆ 97 ವರ್ಷದ ಇತಿಹಾಸ ಮತ್ತು 2556 ಮಂದಿ ಸದಸ್ಯರನ್ನು ಹೊಂದಿದ್ದು, ಇಂತಹ ಸಂಸ್ಥೆಯ ವಿರುದ್ಧ ದಾಖಲೆಗಳಿಲ್ಲದೆ ಆರೋಪ ಮಾಡಿ, ಕುಂದುಂಟು ಮಾಡುವ ಪ್ರಯತ್ನವನ್ನು ತೀವ್ರವಾಗಿ ವಿರೋಧಿಸುವುದಾಗಿ ಹೇಳಿದರು.
ಗೋಷ್ಠಿಯಲ್ಲಿ ನಿರ್ದೇಶಕರು ಗಳಾದ ಎ.ವಿ. ಮಂಜುನಾಥ್, ಪÀÅದಿಯನೆರವನ ರೇವತಿ ಹಾಗೂ ಹೆಚ್.ಎನ್. ಮಂಜುನಾಥ್ ಉಪಸ್ಥಿತರಿದ್ದರು.