*ಸಿದ್ದಾಪುರ, ಅ.18 : ಮೋಟಾರೇ ಅಳವಡಿಕೆಯಾಗದ ಕೃಷಿ ಕೊಳವೆ ಬಾವಿಗಳಿಗೆ ವಿದ್ಯುತ್ ಬಿಲ್ ನೀಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗಿರಿಜನ ಅಭಿವೃದ್ಧಿ ಇಲಾಖೆ ಮತ್ತು ಚೆಸ್ಕಾಂ ವಿರುದ್ಧ ಚೆನ್ನಯ್ಯನ ಕೋಟೆ ಗ್ರಾ.ಪಂ ವ್ಯಾಪ್ತಿಯ ಹಾಡಿ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಂಗಾ ಕಲ್ಯಾಣ ಯೋಜನೆ ಯಡಿ ಗಿರಿಜನ ಕೃಷಿಕ ಫಲಾನುಭವಿ ಗಳಿಗೆ ಕೊಳವೆ ಬಾವಿ ಕೊರೆಸಿ ಮೋಟರ್ ಅಳವಡಿಸುವ ಕಾರ್ಯ *ಸಿದ್ದಾಪುರ, ಅ.18 : ಮೋಟಾರೇ ಅಳವಡಿಕೆಯಾಗದ ಕೃಷಿ ಕೊಳವೆ ಬಾವಿಗಳಿಗೆ ವಿದ್ಯುತ್ ಬಿಲ್ ನೀಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗಿರಿಜನ ಅಭಿವೃದ್ಧಿ ಇಲಾಖೆ ಮತ್ತು ಚೆಸ್ಕಾಂ ವಿರುದ್ಧ ಚೆನ್ನಯ್ಯನ ಕೋಟೆ ಗ್ರಾ.ಪಂ ವ್ಯಾಪ್ತಿಯ ಹಾಡಿ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಂಗಾ ಕಲ್ಯಾಣ ಯೋಜನೆ ಯಡಿ ಗಿರಿಜನ ಕೃಷಿಕ ಫಲಾನುಭವಿ ಗಳಿಗೆ ಕೊಳವೆ ಬಾವಿ ಕೊರೆಸಿ ಮೋಟರ್ ಅಳವಡಿಸುವ ಕಾರ್ಯ ಕುಕ್ಕೆಯನ್ನು ಮುಚ್ಚಲಾಗಿದೆ.

ವಿಚಿತ್ರವೆಂದರೆ ಈ ಕೊಳವೆ ಬಾವಿಗಳಿಗೆ ಮೋಟಾರು ಅಳವಡಿಕೆ ಯಾಗಿದೆ ಎಂದು ಎಲ್ಲಾ 27 ಕುಟುಂಬಗಳಿಗೆ ಮಾಸಿಕ ಸಾವಿರ ರೂಪಾಯಿ ಮೀರಿದ ವಿದ್ಯುತ್ ಬಿಲ್ ಬರುತ್ತಿದೆ. ಚೆಸ್ಕಾಂ ಇಲಾಖೆ ಯಲ್ಲಿ ಮೋಟಾರು ಅಳವಡಿಸಿರುವ ಬಗ್ಗೆ ದಾಖಲೆ ಇದೆ. ಆದರೆ 27 ಮೋಟಾರ್‍ಗಳನ್ನು ದಿಡ್ಡಳ್ಳಿಯ ಗಿರಿಜನ ಬಸವ ಎಂಬುವವರ ಮನೆಯಲ್ಲಿ ಹಾಗೇ ಇಡಲಾಗಿದೆ. ವಿದ್ಯುತ್ ಮೀಟರ್‍ಗಳನ್ನು ಪಾಲಿಬೆಟ್ಟದಲ್ಲಿ ಇರಿಸಲಾಗಿದ್ದು, ಗಿರಿಜನ ಫಲಾನು ಭವಿಗಳು ಇಲಾಖಾಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಿರಿಜನ ಅಭಿವೃದ್ಧಿ ಇಲಾಖೆ ಮತ್ತು ಚೆಸ್ಕಾಂ ನ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಇಲ್ಲಿನ ನಿಜಾಂಶದ ಬಗ್ಗೆ ಅರಿತುಕೊಳ್ಳಬೇಕು ಹಾಗೂ ಕೊಳವೆ ಬಾವಿಗೆ ಮೋಟಾರ್ ಗಳನ್ನು ಅಳವಡಿಸಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕೆಂದು ಹಾಡಿ ನಿವಾಸಿಗಳು ಒತ್ತಾಯಿಸಿದ್ದಾರೆ.

- ಸುಧಿ