ಚೆಟ್ಟಳ್ಳಿ, ಅ. 18: ಕರ್ನಾಟಕ ರಾಜ್ಯ ಫೈಝೀಸ್ ಉಲಮಾ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ (ಸ.) ಜನ್ಮ ತಿಂಗಳಲ್ಲಿ ‘ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿ ಚರ್ಯೆ ಪರಿಹಾರ’ ಎಂಬ ಘೋಷ ವಾಕ್ಯದೊಂದಿಗೆ ಮಿಲಾದ್ ಅಭಿಯಾನವು ತಾ. 19 ರಿಂದ (ಇಂದಿನಿಂದ) ನವೆಂಬರ್ 14ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ 27 ಸ್ಥಳಗಳಲ್ಲಿ ಮೀಲಾದ್ ಮೀಟ್ ನಡೆಯಲಿದೆ. ಅಭಿಯಾನಕ್ಕೆ ತಾ. 19ರಂದು (ಇಂದು) ಕರಾಯ ಮಸೀದಿ ವಠಾರದಲ್ಲಿ ಚಾಲನೆ ನೀಡಲಾಗುವುದು. ಸೈಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಅಭಿಯಾನ ಉದ್ಘಾಟಿಸುವರು. ರಾಜ್ಯ ಫೈಝೀಸ್ ಉಲಮಾ ಒಕ್ಕೂಟದ ಅಧ್ಯಕ್ಷ ಉಸ್ಮಾನುಲ್ ಫೈಝಿ ತೋಡಾರ್ ಅಧ್ಯಕ್ಷತೆ ವಹಿಸುವರು.